ಮೂಡಲಗಿ ಶಿರಸ್ತೆದಾರ ಪರಶುರಾಮ ನಾಯಿಕ ಅವರಿಗೆ ಡಿಎಸ್​ಎಸ್​ ಒಕ್ಕೂಟದಿಂದ ಮನವಿ ಸಲ್ಲಿಸಲಾಯಿತು. ರಮೇಶ ಸಣ್ಣಕ್ಕಿ, ಮರೆಪ್ಪ ಮರೆಪ್ಪಗೋಳ, ಅಶೋಕ ಸಿದ್ದಲಿಂಗಪ್ಪಗೋಳ, ಯಶವಂತ ಮಂಟೂರ ಇತರರಿದ್ದರು. 
ಜಿಲ್ಲೆ

ಪರಿಶಿಷ್ಟರಿಗೆ ಒಳ ಮೀಸಲಾತಿ ಕಲ್ಪಿಸಲಿ


ಮೂಡಲಗಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್​ ಐತಿಹಾಸಿಕ ತೀರ್ಪು ನೀಡಿದೆ. ಅದರಂತೆ ಸಿದ್ದರಾಮಯ್ಯ ಸರ್ಕಾರ ಒಳ ಮೀಸಲಾತಿ ಜಾರಿಗೆ ತರುವಂತೆ ಆಗ್ರಹಿಸಿ ತಾಲೂಕಿನ ವಿವಿಧ ದಲಿತ ಸಂಟನೆಗಳ ಒಕ್ಕೂಟದ ಪದಾಧಿಕಾರಿಗಳು ಮೂಡಲಗಿ ತಹಸೀಲ್ದಾರ್​ ಕಚೇರಿ ಶಿರಸ್ತೆದಾರ ಪರಶುರಾಮ ನಾಯಿಕ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಶನಿವಾರ ಮನವಿ ಸಲ್ಲಿಸಿದರು.

ದಶಕಗಳಿಂದ ದೇಶದಲ್ಲಿ ಪರಿಶಿಷ್ಟರಿಗೆ ಒಳ ಮೀಸಲಾತಿ ಕಲ್ಪಿಸುವಂತೆ ಹೋರಾಟ ಮಾಡಲಾಗಿದೆ. ಅದರಂತೆ ರಾಜ್ಯಾದ್ಯಂತ ವಿವಿಧ ದಲಿತ ಸಂಟನೆಗಳ ಒಕ್ಕೂಟದಿಂದ ಬೀದಿಗಿಳಿದು ಹೋರಾಟ ಮಾಡಿದ್ದೇವೆ. ಸುಪ್ರೀಂ ಕೋರ್ಟ್​ ತೀರ್ಪು ಹೋರಾಟಕ್ಕೆ ಸಂದ ಜಯ.
ಮುಖ್ಯಮಂತ್ರಿ ಕೂಡಲೇ ವಿಶೇಷ ಅಧಿವೇಶನ ಕರೆದು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಮಂಡಿಸಿ ಜಾರಿಗೆ ತಂದು ಒಳ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ದಲಿತ ಸಂರ್ಷ ಸಮಿತಿ ಜಿಲ್ಲಾ ಸಂಚಾಲಕ ರಮೇಶ ಸಣ್ಣಕ್ಕಿ, ಮರೆಪ್ಪ ಮರೆಪ್ಪಗೋಳ, ಅಶೋಕ ಸಿದ್ದಲಿಂಗಪ್ಪಗೋಳ, ಯಶವಂತ ಮಂಟೂರ, ಸುರೇಶ ಸಣ್ಣಕ್ಕಿ, ವಿಲ್ಸನ್​ ಢವಳೇಶ್ವರ, ಪ್ರಕಾಶ ಮಾದರ, ಕೆಂಪಣ್ಣ ಮೇತ್ರಿ, ಯಮನಪ್ಪ ಮಾದರ, ಅನಿಲ ಗಸ್ತಿ, ಸುಂದರ ಬಾಲಪ್ಪಗೋಳ, ಬಂಡು ಸದಲಗಾ ಇತರರು ಇದ್ದರು.