ಜಿಲ್ಲೆ

ಪರಿಶಿಷ್ಟ ಜಾತಿ ಸಮೀಕ್ಷೆಗೆ ಕಾಲಾವಕಾಶ ವಿಸ್ತರಿಸಿ

ಚಾಮರಾಜನಗರ: ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಸಂಬಂಧ ಮೇ 5 ರಿಂದ ಪ್ರಾರಂಭವಾಗಿರುವ ಪರಿಶಿಷ್ಟ ಜಾತಿ ಜನಗಣತಿಗೆ ಕಾಲಾವಕಾಶವನ್ನು ವಿಸ್ತರಣೆ ಮಾಡಬೇಕು ಎಂದು ದಲಿತ ಮಹಾಸಭಾ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ(ಪಾಪು) ಆಗ್ರಹಿಸಿದರು.

ಜಿಲ್ಲೆಯಲ್ಲಿ 2 ದಿನಗಳಿಂದ ಪರಿಪೂರ್ಣವಾಗಿ ಸಮೀಕ್ಷೆ ನಡೆಯುತ್ತಿಲ್ಲ. ಆದರೆ ಮೇ 17 ರವರೆಗೆ ಕಾಲಾವಕಾಶವನ್ನು ನೀಡಲಾಗಿದೆ. ಕೆಲವೇ ದಿನಗಳಲ್ಲಿ ಸಮೀಕ್ಷೆ ಮುಕ್ತಾಯವಾಗುತ್ತದೆ ಎಂದು ಹೇಳಲು ಆಗುವುದಿಲ್ಲ. ವಿಶೇಷವಾಗಿ ಪರಿಶಿಷ್ಟ ಜಾತಿಗಳ ಯಾವ ಬೀದಿಗೆ ಯಾವ ಗಣತಿದಾರರನ್ನು ಹಾಕಿದ್ದಾರೆ ಎಂಬ ಮಾಹಿತಿ ಸರಿಯಾಗಿ ಜನರಿಗೆ ಲಭ್ಯವಿಲ್ಲ. ಇನ್ನು ಉಳಿದ ದಿನದಲ್ಲಿ ಸಮೀಕ್ಷೆಯನ್ನು ಪೂರ್ಣ ಪ್ರಮಾಣದಲ್ಲಿ ಮುಕ್ತಾಯಗೊಳಿಸಲು ಸಾಧ್ಯವಿಲ್ಲ. ಆಗಾಗಿ ಸರ್ಕಾರ ಸಮೀಕ್ಷೆಗೆ ಕಾಲಾವಕಾಶವನ್ನು ವಿಸ್ತರಣೆ ಮಾಡಬೇಕು ಎಂದು ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಜಿಲಲೆಯಲ್ಲಿ ಸಮೀಕ್ಷೆ ಪ್ರಾರಂಭವಾದ ದಿನಗಳಿಂದ ಹೊಲೆಯ ಮತ್ತು ಹೊಲಯ ಉಪಜಾತಿಗಳನ್ನು ಬಳಕೆ ಮಾಡುವುದರಲ್ಲಿ ಗೊಂದಲ ಮಾಡಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಹೊಲಯ ಮತ್ತು ಮಾದಿಗರು ತಮ್ಮ ಉಪಜಾತಿಗಳನ್ನು ಯಾವುದೇ ಗೊಂದಲಕ್ಕೆ ಒಳಗಾಗದೇ ಗುರುತಿಸಬೇಕು. ಕೆಲವು ಜಾತಿಗಳು ಸಣ್ಣಪುಟ್ಟ ಸಮುದಾಯದವರನ್ನು ಪುಕಲಾಯಿಸಿ ಬೇರೆ ಉಪಜಾತಿಗಳನ್ನು ಬರೆಸುವಂತೆ ಒತ್ತಡ ತರುತ್ತಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸೂಕ್ತ ಕ್ರಮವನ್ನು ವಹಿಸಬೇಕು ಎಂದರು. ಗೋಷ್ಠಿಯಲ್ಲಿ ದಲಿತ ಮುಖಂಡ ನಾಗರಾಜ್, ಕೆ.ಸಿ.ರಂಗಸ್ವಾಮಿ, ಗೌರಿಶಂಕರ್ ಹಾಜರಿದ್ದರು.

ಸಮಾಜ ಕಲ್ಯಾಣಾಧಿಕಾರಿ ವಿಲ:

ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಜನಗಣತಿಯನ್ನು ಸೂಕ್ತ ರೀತಿಯಲ್ಲಿ ನಡೆಸಲು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮುನಿರಾಜ್ ವಿಲರಾಗಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿ.ಎಂ.ಶಿವಣ್ಣ ಆರೋಪಿಸಿದರು. ಸಮೀಕ್ಷೆಗೆ ನೇಮಕ ಮಾಡಿರುವ ಗಣತಿದಾರರು ಮನೆಮನೆಗೆ ಭೇಟಿ ನೀಡದೆ, ಒಂದೆಡೆ ಕುಳಿತು ಸಮೀಕ್ಷೆ ಮಾಡುತ್ತಿದ್ದಾರೆ. ನೋಡಲ್ ಅಧಿಕಾರಿಗಳು ಈ ಸಂಬಂಧ ಸೂಕ್ತ ಕ್ರಮವನ್ನು ವಹಿಸಿಲ್ಲ. ಸಮಾಜ ಕಲ್ಯಾನ ಅಧಿಕಾರಿ ಮುನಿರಾಜ್ ಸಮೀಕ್ಷೆಯನ್ನು ದಿಕ್ಕುತಪ್ಪಿಸುವ ಹುನ್ನಾರ ಕೈಗೊಂಡಿದ್ದಾರೆ ದೂರಿದರು.