ಬಾಗಲಕೋಟೆ: ಪರಿಪೂರ್ಣತೆಯಿಂದ ನಿಖರವಾಗಿ ಕಾರ್ಯರೂಪಕ್ಕೆ ಇಳಿಸುವಂತ ಸಾಮರ್ಥ್ಯವನ್ನು ಭಾರತೀಯ ತಂತ್ರಜ್ಞರು ಹೊಂದಿದ್ದಾರೆ ಎಂದು ಬಿವಿವಿ ಸಂಘದ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ. ಆರ್.ಎನ್.ಹೆರಕಲ್ ಹೇಳಿದರು.
ನಗರದ ಬಿವಿವಿ ಸಂಘದ ಬಸವೇಶ್ವರ ಇಂಜಿನೀಯರಿ0ಗ್ ಕಾಲೇಜಿಲ್ಲಿ ಐಕ್ಯೂಎಸಿ ಹಾಗೂ ಇಲೇಕ್ಟಾçನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಸಹಯೋಗದಲ್ಲಿ ಶುಕ್ರವಾರ ನಡೆದ ಕಾಲೇಜು ಮಟ್ಟದ ಇಂಜಿನಿಯರಿ0ಗ ವಿದ್ಯಾರ್ಥಿಗಳ ಪ್ರಾಜೇಕ್ಟ್ ಪ್ರದರ್ಶನ ಅವಿಷ್ಕಾರ - ೨೦೨೫ ವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಧಾನ ಮಂತ್ರಿಗಳ ಆಶಯದ ಮೇಕ್ ಇನ್ ಇಂಡಿಯಾದAತ ಕಲ್ಪನೆಗಳು ಇಂದು ಉತ್ತಮ -pಲಿತಾಂಶ ನೀಡುತ್ತಿವೆ. ನಮ್ಮ ಸ್ವದೇಶಿ ಪ್ರತಿಭೆಗಳಿಂದ ನಿರ್ಮಿತ ತಾಂತ್ರಿಕ ಉತ್ಪನಗಳಿಂದ ನಾವಿಂದು ಬೃಹತ್ ಜಾಗತಿಕ ಶಕ್ತಿಯಾಗಿ ಬೆಳೆದು ನಿಂತಿದ್ದೇವೆ. ಇಂಥಹ ವೇದಿಕೆ ಮೂಲಕ ವಿದ್ಯಾರ್ಥಿಗಳು ನಾವಿನ್ಯತೆಗಳ ಕುರಿತು ಯೋಜಿಸಿ ಸಾಕಾರಗೊಳಿಸುವತ್ತ ಪ್ರಯತ್ನಿಸಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಡಾ.ಬಿ.ಆರ್. ಹಿರೇಮಠ ಮಾತನಾಡಿ, ಶೈಕ್ಷಣಿಕ ಮತ್ತು ಸೃಜನಾತ್ಮಕ ಚಟುವಟಿಕೆಗಳಿಗೆ ನಿರಂತವಾಗಿ ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ, ಇಂಥಹ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ತಾಂತ್ರಿಕ ನೈಪುಣ್ಯತೆ ಮತ್ತು ಕೌಶಲಗಳು ವೃದ್ಧಿಯಾಗಲಿವೆ ಎಂದರು.
ಕಾರ್ಯಕ್ರಮದಲ್ಲಿ ದಾರವಾಡ ಐಐಐಟಿ ಪ್ರಾಧ್ಯಾಪಕ ಡಾ.ಮಂಜುನಾಥ, ಡಾ.ಪಂಕಜ ಕುಮಾರ ನಿರ್ಣಾಯಕರಾಗಿ ಭಾಗವಹಿಸಿದ್ದರು. ಆರ್ ಆ್ಯಂಡ್ ಡಿ ವಿಭಾಗದ ಡೀನ್ ಡಾ.ಮಹಾಬಳೇಶ್ವರ.ಎಸ್.ಕೆ, ಅಕಾಡೆಮಿಕ ಡೀನ ಡಾ.ಪಿ.ಎನ್.ಕುಲಕರ್ಣಿ, ವೈ.ಎಸ್.ನಾರಾಯಣ, ಅಭಿವೃದ್ಧಿ ಅಽಕಾರಿ ಪ್ರೊ.ಬಿ.ಎಸ್.ಹರವಿ, ಡಾ. ಭಾರತಿ ಮೇಟಿ, ಸಂಯೋಜಕ ಡಾ.ಬಿ.ಎಂ.ಅAಗಡಿ, ವಿಭಾಗದ ಮುಖ್ಯಸ್ಥರುಗಳು, ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಡಾ. ಮಮತಾ ಸತರೆಡ್ಡಿ ಸ್ವಾಗತಿಸಿದರು. ಅನನ್ಯ ಜೋಶಿ ಪ್ರಾರ್ಥಿಸಿದರು, ಇ.ಸಿ.ಇ ವಿಭಾಗದ ಮುಖ್ಯಸ್ಥರಾದ ಡಾ.ಜಯಶ್ರೀ ಮಲ್ಲಾಪುರ ವಂದಿಸಿದರು. ಐಶ್ವರ್ಯ ಹಿಪ್ಪರಗಿ ನಿರೂಪಿಸಿದರು.