ಜಿಲ್ಲೆ

ಪರಿಪೂರ್ಣ ವ್ಯಕ್ತಿತ್ವಕ್ಕೆ ಕ್ರೀಡೆ ಸಹಕಾರಿ

ರಮೇಶ ಮೇಳಕುಂದಾ

ಔರಾದ್: ಪಠ್ಯ ಹಾಗೂ ಕ್ರೀಡಾ ಚಟುವಟಿಕೆ ವ್ಯಕ್ತಿತ್ವ ವಿಕಸನಕ್ಕೆ ನೆರವಾಗುತ್ತವೆ. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಆಟೋಟಗಳಲ್ಲಿ ಭಾಗವಹಿಸಬೇಕು ಎಂದು ರಾಷ್ಟಿಯ ರಚನಾತ್ಮಕ ಕಾರ್ಯ ಸಮಿತಿ (ಆರ್‌ಆರ್‌ಕೆ) ಕಾರ್ಯದರ್ಶಿ ಶರಣಬಸಪ್ಪ ದೇಶಮುಖ ಕಿವಿಮಾತು ಹೇಳಿದರು.
ಪಟ್ಟಣದ ಅಮರೇಶ್ವರ ಕಾಲೇಜು ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪಿಯುಸಿ ವಿದ್ಯಾರ್ಥಿಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಮಾತನಾಡಿ, ಓದುವುದರಿಂದ ಜ್ಞಾನ ವಿಕಸನವಾದರೆ, ಆಟೋಟಗಳಿಂದ ದೈಹಿಕ ಕ್ಷಮತೆ ವೃದ್ಧಿ ಸಾಧ್ಯ. ಅಧ್ಯಯನದ ಜತೆಗೆ ಕ್ರೀಡೆ ರೂಢಿಸಿಕೊಳ್ಳಬೇಕು. ಪರಿಪೂರ್ಣ ವ್ಯಕ್ತಿತ್ವಕ್ಕೆ ಕ್ರೀಡೆ ಸಹಕಾರಿ ಎಂದರು.
ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಓಂಪ್ರಕಾಶ ದಡ್ಡೆ ಮಾತನಾಡಿ, ಗ್ರಾಮೀಣ ಭಾಗದಿಂದ ಹೆಚ್ಚಿನ ಮಕ್ಕಳು ಜಿಲ್ಲಾ, ರಾಜ್ಯ, ರಾಷ್ಟçಮಟ್ಟದ ಕ್ರೀಡೆಗಳಲ್ಲಿ ಸಾಧನೆ ಮಾಡಬೇಕು. ಹಳ್ಳಿ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಹೇಳಿದರು.
ಪ್ರಾಂಶುಪಾಲ ಡಾ.ಮನ್ಮಥ ಡೋಳೆ, ಸುರೇಶ ಅಕ್ಕಣ್ಣ ಮಾತನಾಡಿದರು. ಡಾ.ಜಯದೇವಿ ತೇಲಿ, ಶರಣಪ್ಪ ಚಿಟಮೆ, ಮನ್ಮಥಪ್ಪ ಸ್ವಾಮಿ, ಶಿವಾಜಿರಾವ ಬೆಂಜವಾಡ, ಅನೀಲಕುಮಾರ ಕರಂಜೆ ಇತರರಿದ್ದರು. ರೇವಣಯ್ಯ ಮಠ ಸ್ವಾಗತಿಸಿದರು.