ಬಾಗಲಕೋಟೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ (ಐಕ್ಯೂಎಸಿ) ಆಂತರಿಕ ಗುಣಮಟ್ಟ ಭರವಸೆ ಕೋಶದ ಮತ್ತು ಕಂಪ್ಯೂಟರ ವಿಭಾಗದ ಅಡಿಯಲ್ಲಿ ಸಿಬ್ಬಂದಿ ತರಬೇತಿ ಕಾರ್ಯಾಗಾರಕ್ಕೆ ಗುರುವಾರ ಸಹ ಪ್ರಾಧ್ಯಾಪಕ ಡಾ.ಜಿ.ಜಿ.ಹಿರೇಮಠ ಉದ್ಘಾಟಿಸಿದರು. ಐಕ್ಯೂಎಸಿ ಸಂಚಾಲಕ ಡಾ.ಪ್ರಭುದೇವ ಮಂಡಿ, ಡಾ.ಭಾಗೀರತಿ ಹಾಲಳ್ಳಿ, ಡಾ.ಮೂಬಿನ್ ಬೆಳಗಾಮ್, ಡಾ.ಸುನಂದಾ ಬೂದಿಹಾಳ ಉಪಸ್ಥಿತರಿದ್ದರು. 
ಜಿಲ್ಲೆ

ಪರಿಣಾಮಕಾರಿ ಬೋಧನೆಗೆ ತಂತ್ರಜ್ಞಾನ ಬಳಕೆ ಪೂರಕ

ಬಾಗಲಕೋಟೆ: ವಿದ್ಯಾರ್ಥಿಗಳ ಕೈಯಲ್ಲಿಂದು ತಂತ್ರಜ್ಞಾನದ ಆವಿಷ್ಕಾರಗಳಾದ ಮೊಬೈಲ್, ಟ್ಯಾಬ್ ಮತ್ತು ಕಂಪ್ಯೂಟರಗಳಿದ್ದು, ಬೋಧನೆ ಮಾಡುವ ಬೋಧಕರು ತಮ್ಮ ಬೋಧನೆಯಲ್ಲಿ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡರೆ ವಿದ್ಯಾರ್ಥಿಗಳಲ್ಲಿ ಪರಿಣಾಮಕಾರಿ ಕಲಿಕೆಯಾಗುತ್ತದೆ ಎಂದು ಸಹ ಪ್ರಾಧ್ಯಾಪಕ ಡಾ.ಜಿ.ಜಿ.ಹಿರೇಮಠ ಹೇಳಿದರು.

ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ (ಐಕ್ಯೂಎಸಿ) ಆಂತರಿಕ ಗುಣಮಟ್ಟ ಭರವಸೆ ಕೋಶದ ಮತ್ತು ಕಂಪ್ಯೂಟರ ವಿಭಾಗದ ಅಡಿಯಲ್ಲಿ ನಡೆದ ಒಂದು ವಾರಕಾಲ ನಡೆಯುವ ಸಿಬ್ಬಂದಿ ತರಬೇತಿ ಕಾರ್ಯಾಗಾರಕ್ಕೆ ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಉನ್ನತ ಶಿಕ್ಷಣದಲ್ಲಿಂದು ವಿವಿಧ ವಿಷಯಗಳ ಬೋಧಕರು ತಮ್ಮ ಬೋಧನೆಯ ಜೊತೆ ಜೊತಗೆ ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನದ ಬಳಕೆ ಮಹತ್ವವನ್ನು ತಿಳಿಸಿಕೊಡಬೇಕು ಎಂದರು.

ಐಕ್ಯೂಎಸಿ ಸಂಚಾಲಕ ಡಾ.ಪ್ರಭುದೇವ ಮಂಡಿ ಮತನಾಡಿ, ಉನ್ನತ ಶಿಕ್ಷಣದಲ್ಲಿ ಪದವಿ ಕಲಿಯುವ ವಿದ್ಯಾರ್ಥಿಗಳಿಗೆ ಮತ್ತು ಬೋಧಕರಿಗೆ ತಂತ್ರಜ್ಞಾನ ಮಾಹಿತಿ ಅವಶ್ಯಕತೆ ಇದೆ. ತಂತ್ರಜ್ಞಾನದ ಮೂಲಕ ವಿವಿಧ ಕೌಶಲ್ಯಗಳನ್ನು ಅಳವಡಿಸಿಕೊಂಡು ಪರಿಣಾಮಕಾರಿ ಬೋಧನೆ ಮಾಡಿದರೆ ಉನ್ನತ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಡಾ.ಭಾಗೀರತಿ ಹಾಲಳ್ಳಿ ಕಂಪ್ಯೂಟರ ಬಳಕೆಯ ಎಂ.ಎಸ್. ವರ್ಡ ಉಪಯೋಗ ಕುರಿತು ಮಾಹಿತಿ ನೀಡಿದರು. ಐಕ್ಯೂಎಸಿ ಸಹ ಸಂಚಾಲಕರಾದ ಡಾ.ಮೂಬಿನ್ ಬೆಳಗಾಮ್, ಡಾ.ಸುನಂದಾ ಬೂದಿಹಾಳ ಉಪಸ್ಥಿತರಿದ್ದರು.