ಜಿಲ್ಲೆ

ಪರಾರಿಯಾಗಿದ್ದ ಕೈದಿ ಬಂಧನ

ದಾವಣಗೆರೆ : ಇಲ್ಲಿನ ಜಿಲ್ಲಾ ಕಾರಾಗೃಹದಿಂದ ಪರಾರಿಯಾಗಿದ್ದ, ಪೋಕ್ಸೋ ಪ್ರಕರಣದ ವಿಚಾರಣಾಧೀನ ಕೈದಿಯನ್ನು ಪೊಲೀಸರು, ಒಂದೇ ದಿನದಲ್ಲಿ ಪತ್ತೆ ಹಚ್ಚಿದ್ದಾರೆ.

ಕರೂರು ನಿವಾಸಿ ವಸಂತ ಶನಿವಾರ, ಜೈಲಿನ ಗೋಡೆ ಹತ್ತಿ ಅಲ್ಲಿಂದ ಜಿಗಿದು ಪರಾರಿಯಾಗಿದ್ದ. ಬಸವನಗರ ಠಾಣೆ ಇನ್ಸ್‌ಪೆಕ್ಟರ್ ಗುರುಬಸವರಾಜ್ ನೇತೃತ್ವದಲ್ಲಿ ಪಿಎಸ್‌ಐ ನಾಗರಾಜ ಮತ್ತು ಸಿಬ್ಬಂದಿ ಭಾನುವಾರ ನಡೆಸಿದ ಕಾರ್ಯಾಚರಣೆಯಲ್ಲಿ ಕೈದಿ ಸಿಕ್ಕುಬಿದ್ದಿದ್ದಾನೆ.

ಹರಿಹರ ತಾಲ್ಲೂಕಿನ ದುಗ್ಗಾವತಿ ಗ್ರಾಮದಲ್ಲಿ ಸಂಬಂಧಿ ಮನೆಯಲ್ಲಿ ಅಡಗಿದ್ದ ಕೈದಿಯನ್ನು ಪತ್ತೆ ಹಚ್ಚಿದ ಪೊಲೀಸರು ಮತ್ತೆ ಕಾರಾಗೃಹದಲ್ಲಿ ಇರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

---