ಜಿಲ್ಲೆ

ಪರಾಂಜಪೆಗೆ ಚಿನ್ನದ ಪದಕ

ಧಾರವಾಡ: ನಗರದ ಕೆಲಗೇರಿ ಆವರಣದಲ್ಲಿನ ಕೆ.ಇ. ಬೋರ್ಡ್ಸ್ ಆಂಗ್ಲ ಮಾಧ್ಯಮ ಶಾಲೆ 7ನೇ ತರಗತಿ ವಿದ್ಯಾರ್ಥಿನಿ ಅಹನಾ ಪರಾಂಜಪೆ ಡ್ರೀಮ್ ವರ್ಲ್ಡ್ ಮಾರ್ಟಿಯಲ್ ಆರ್ಟ್ಸ್ ಆಶ್ರಯದಲ್ಲಿ ಏರ್ಪಡಿಸಿದ್ದ ಆಲ್-ಇಂಡಿಯಾ ಆನ್-ಲೈನ್ ಓಪನ್ ಕರಾಟೆ ಚಾಂಪಿಯನ್‌ಷಿಪ್-2023ರಲ್ಲಿ ಚಿನ್ನದ ಪದಕ ಪಡೆದಿದ್ದಾಳೆ.
ಗಂಗಾವತಿಯ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸ್ಪರ್ಧೆಯ ಕಟಾ ವಿಭಾಗದಲ್ಲಿ ಪದಕ ಪಡೆದಿದ್ದಾಳೆ. ವಿದ್ಯಾರ್ಥಿನಿ ಸಾಧನೆಗೆ ಕೆ.ಇ. ಬೋರ್ಡಿನ ಕಾಯಾಧ್ಯಕ್ಷ ಶ್ರೀಕಾಂತ ಪಾಟೀಲ, ಕಾರ್ಯದರ್ಶಿ ಡಿ.ಎಸ್. ರಾಜಪುರೋಹಿತ, ಶ್ರೀನಿವಾಸ ಪರಾಂಡೆ, ವಸಂತ ಮುರ್ಡೇಶ್ವರ, ರಾಘವೇಂದ್ರ ಗುತ್ತಲ, ಪಲ್ಲವಿ ಆಕಳವಾಡಿ, ಮೃತ್ಯುಂಜಯ ಅಗಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.