ಜಿಲ್ಲೆ

ಪರಸ್ಪರ ಸಹಕರದಿಂದ ಮುನ್ನಡೆಯಿರಿ

ಚಾಮರಾಜನಗರ: ಸೌಹಾರ್ದ ಸಹಕಾರ ಸಂಘದ ನೂತನ ನಿರ್ದೇಶಕರು ಸಂಘದ ಸದಸ್ಯರ ಹಿತರಕ್ಷಣೆ ಹಾಗೂ ಸೌಹಾರ್ದ ಕಾಯದೆಯಡಿಯಲ್ಲಿ ಪರಸ್ಪರ ಸಹಕಾರದಿಂದ ಸಂಘವನ್ನು ಮುನ್ನಡೆಸಿ ಎಂದು ಮರಿಯಾಲ ಮಠದ ಶ್ರೀಇಮ್ಮಡಿ ಮುರುಘರಾಜೇಂದ್ರಸ್ವಾಮೀಜಿ ತಿಳಿಸಿದರು.

ತಾಲೂಕಿನ ಮರಿಯಾಲದ ಶ್ರೀಮುರುಘರಾಜೇಂದ್ರಸ್ವಾಮಿ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ 13 ಸದಸ್ಯರು ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ನೂತನ ನಿರ್ದೇಶಕರನ್ನು ಅಭಿನಂದಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಮಾದರಿಯಾಗಿ ಸಂಘ ರಚನೆಯಾಗಬೇಕು. ಇದೊಂದು ಸೌಹಾರ್ದ ಸಹಕಾರ ಸಂಘವಾಗಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಸಂಘದ ಸದಸ್ಯರ ಷೇರು ಹಣ ಹಾಗು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ, ಸಾಲ ಸೌಲಭ್ಯಗಳನ್ನು ಕಲ್ಪಿಸಿ, ಸಕಾಲದಲ್ಲಿ ಸಾಲ ಮರುಪಾವತಿ ಮಾಡಿಸಿಕೊಂಡು ಆರ್ಥಿಕ ಅಭಿವೃದ್ದಿಯಲ್ಲಿ ಮುನ್ನಡೆಯಬೇಕು ಎಂದು ಕಿವಿಮಾತು ಹೇಳಿದರು.

12 ಮಂದಿ ಅವಿರೋಧ ಆಯ್ಕೆ : ನಿರ್ದೇಶಕರಾಗಿ ಪಿ. ಕುಮಾರಸ್ವಾಮಿ, ಎಂ.ಆರ್.ಸ್ವಾಮಿ, ಜಿ. ಪ್ರಸನ್ನ, ಪಿ. ಮಹದೇವಸ್ವಾಮಿ, ಎಚ್.ಆರ್. ಮಂಜು, ಬಿ. ನಂಜುಂಡಸ್ವಾಮಿ, ಎಸ್. ಶಂಭು, ಎನ್. ನಂದಿನಿ, ನಾಗು, ಎಚ್.ವಿ. ಶ್ರೀನಿವಾಸ್, ಬಿ. ಸೀತಾಲಕ್ಷ್ಮಿ, ಎಸ್. ಜಯರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಸ್.ಪಿ. ರವಿಪ್ರಸಾದ್ ಘೋಷಣೆ ಮಾಡಿದರು.