ಜಿಲ್ಲೆ

ಪರಸ್ಪರ ಅರಿತು ಬಾಳಿದರೆ ಬದುಕು ಉತ್ತಮ

ತಲ್ಲೂರ: ದಂಪತಿಗಳು ಪರಸ್ಪರ ಅರಿತುಕೊಂಡು ಜೀವನದುದ್ದಕ್ಕೂ ಉತ್ತಮ ಸಹಬಾಳ್ವೆ ನಡೆಸಬೇಕು. ಅಂದಾಗ ಮಾತ್ರ, ಬದುಕು ಸಾರ್ಥಕವಾಗುತ್ತದೆ ಎಂದು ಗೊರವನಕೊಳ್ಳದ ಬ್ರಹ್ಮಾನಂದ ಆಶ್ರಮದ ಶಿವಾನಂದ ಸ್ವಾಮೀಜಿ ಹೇಳಿದರು.

ಸಮೀಪದ ಮದ್ಲೂರ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಬಾಲ್ಯಾವಸ್ಥೆಯಲ್ಲೇ ಮಕ್ಕಳಿಗೆ ಉತ್ತಮ ಸಂಸ್ಕೃತಿ, ಸಂಸ್ಕಾರ ನೀಡಿದರೆ ಭವಿಷ್ಯ ಉಜ್ವಲಗೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಮುನವಳ್ಳಿಯ ಸೋಮಶೇಖರ ಮಠದ ಮುರಘೇಂದ್ರ ಸ್ವಾಮೀಜಿ ಮಾತನಾಡಿ, ಆತ್ಮಸಾಕ್ಷಾತ್ಕಾರವೇ ಜೀವನದ ಉನ್ನತ ಗುರಿಯಾಗಬೇಕು. ಮನುಷ್ಯ ಉತ್ತಮ ಆಚಾರ ವಿಚಾರ ಅಳವಡಿಸಿಕೊಳ್ಳಬೇಕು ಎಂದರು.

ಶಶಿಕಾಂತ ಗುರೂಜಿ, ಇಂಚಗೇರಿಮಠದ ಪ್ರಭು ಮಹಾರಾಜರು, ಪತ್ರಯ್ಯ ಸ್ವಾಮೀಜಿ, ಅನಿಮಾನಂದ ಆಶ್ರಮದ ಪ್ರಮೀಳಾ, ಬಸಯ್ಯ ಸ್ವಾಮೀಜಿ ಮಾತನಾಡಿದರು.

ಪಿಕೆಪಿಎಸ್ ಅಧ್ಯಕ್ಷ ಲಕ್ಷ್ಮಣ ಹೊಟ್ಟಿ, ಎಪಿಎಂಸಿ ಸದಸ್ಯ ಸಿದ್ಧಾರೂಢ ಬಿಲಕಂಚಿ, ಜಿ.ಎಚ್.ದೊಡ್ಡಮನಿ, ಮಹಾದೇವ ಮುರಗೋಡ, ಸುಭಾನಿ ದೊಡ್ಡಮನಿ, ಸಿದ್ದಪ್ಪ ಕುರಿ, ಬಸವರಾಜ ಸುಣಗಾರ, ಅಶೋಕ ದೇಶನೂರ, ಎಂ.ಬಿ.ಕಲಕುಟ್ರಿ, ಬಾಲಪ್ಪ ಬಂಡಿವಾಡ, ಎಫ್.ಎಸ್.ಕುರಿ, ನಿಂಗಪ್ಪ ಹೊಟ್ಟಿ ಇತರರಿದ್ದರು. ವಿಠ್ಠಲ ಪಚ್ಚಿನ್ನವರ ನಿರೂಪಿಸಿದರು.