ಜಿಲ್ಲೆ

ಪರವಾನಗಿ ರಹಿತ ರಸಗೊಬ್ಬರ,ಬಿತ್ತನೆ ಬೀಜ ಜಫ್ತು

ಚಿತ್ರದುರ್ಗ: ಪರವಾನಗಿ ಇಲ್ಲದೆ ಅನಧಿಕೃತವಾಗಿ ರಸಗೊಬ್ಬರ ಮಾರಾಟ ಮಾಡುತ್ತಿದ್ದ ಮಳಿಗೆ ಮೇಲೆ ಕೃಷಿ ಇಲಾಖೆ ಜಾರಿದಳ ಅಧಿಕಾರಿಗಳು ಮ ಂಗಳವಾರ ದಾಳಿ ನಡೆಸಿ ರಸಗೊಬ್ಬರ ಹಾಗೂ ಬಿತ್ತನೆ ಬೀಜವನ್ನು ವಶ ಪಡಿಸಿಕೊಂಡಿದ್ದಾರೆ.

ಚಿತ್ರದುರ್ಗ ತಾಲೂಕು ದೊಡ್ಡ ಆಲದಘಟ್ಟದ ಕೆ.ಬಿ.ನಟರಾಜ್ ಅವರ ಮಳಿಗೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಅಲ್ಲಿದ್ದ 391 ಯೂರಿಯಾ, 272 ಚೀಲ 20:20: 0:13 ಕಾಂಪ್ಲೆ ಕ್ಸ್ ರಸಗೊಬ್ಬರ(ಎಂ.ಸಿ.ಎಫ್ ಸಂಸ್ಥೆಯ)ಹಾಗೂ 16.76 ಕ್ವಿಂಟಾಲ್ ಮೆಕ್ಕೆಜೋಳ ಬಿತ್ತನೆ ಬೀಜವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಜಾರಿದಳ ತಂಡದ ಮುಖ್ಯಸ್ಥ ಸಿ.ವಿದ್ಯಾನಂದ,ಉಪಕೃಷಿ ನಿರ್ದೇಶಕರಾದ ಟಿ.ಎನ್.ಅಶೋಕ್,ಕೆ.ಎಸ್.ಶಿವ ಕುಮಾರ್,ಸಹಾಯಕ ಕೃಷಿ ನಿರ್ದೇಶಕರಾದ ಜೆ.ಉಲ್ಫತ್ ಜೈಬಾ,ಎಚ್.ವಿ.ನಾಗರಾಜ,ಎಂ.ರೇಣುಕಾ ಪ್ರಸನ್ನ,ಎಚ್.ಕೆ.ರಾಮಕೃಷ್ಣ ಹಾಗೂ ಕೃಷಿ ಸಂಪರ್ಕ ಅಧಿಕಾರಿ ಕೆ.ಧನರಾಜ್ ಕಾರ‌್ಯಾಚರಣೆಯಲ್ಲಿದ್ದರು.

---