Paramananda Indian Icon Award 
ಜಿಲ್ಲೆ

ಪರಮಾನಂದಗೆ ಇಂಡಿಯನ್ ಐಕಾನ್ ಅವಾರ್ಡ್

ಮಹಾಲಿಂಗಪುರ: ಸಮಾಜ ಸೇವೆಗೆ ಬೆಂಗಳೂರಿನ ಓರಿಯೆಂಟಲ್ ೌಂಡೇಷನ್ ವತಿಯಿಂದ ನೀಡಲಾಗುವ ಇಂಡಿಯನ್ ಐಕಾನ್ ಅವಾರ್ಡ್‌ನ್ನು ರನ್ನಬೆಳಗಲಿಯ ಕನ್ನಡಪರ ಸಂಘಟನೆ ರೂವಾರಿ ಪರಮಾನಂದ ಸನ್ನಟ್ಟಿ ಅವರಿಗೆ ನೀಡಿ ಗೌರವಿಸಲಾಗಿದೆ.

ಇತ್ತೀಚೆಗೆ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್‌ನ ಕೃಷ್ಣರಾಜ ಪರಿಷತ್ ಮಂದಿರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಓರಿಯೆಂಟಲ್ ೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ರವಿಕುಮಾರ ಇದ್ದರು.