ಜಿಲ್ಲೆ

ಪರಧರ್ಮ ಸಹಿಷ್ಣುಗಳಾಗಿ ಜೀವಿಸಿ

ಕಂಪ್ಲಿ: ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜಯಂತ್ಯುತ್ಸವ ಅಂಗವಾಗಿ ಪಟ್ಟಣದ ಸೈಯ್ಯದ್‌ಷಾಹ್ ಬಡೇಸಾಹೇಬ್ ದರ್ಗಾದಲ್ಲಿ ಮುಸ್ಲಿಮರು ಶುಕ್ರವಾರ ಪ್ರಾರ್ಥನೆ ಸಲ್ಲಿಸಿದರು.

ಮುಸ್ಲಿಂ ಧರ್ಮಗುರು ಸೈಯ್ಯದ್‌ಷಾಹ್ ಅಬುಲ್ ಹಸನ್ ಖಾದ್ರಿ ಉರುಫ್ ಆಜಂಪಾಷ ಸಾಹೇಬ್ ಸಜ್ಜದೇ ನಶೀನ್ ದಿವಾನಾಖಾನಾ ಅವರು ಸಂದೇಶ ನೀಡಿ, ಮುಹಮ್ಮದ್ ಪೈಗಂಬರ್ ಅವರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪರಧರ್ಮ ಸಹಿಷ್ಣುಗಳಾಗಿ, ಸುಖ, ಶಾಂತಿಯಿಂದ ಜೀವಿಸಬೇಕು ಎಂದರು.

ಇದಕ್ಕೂ ಮುನ್ನ ಕೋಟೆಯ ಝಂಡಾಕಟ್ಟೆಯಿಂದ ಆರಂಭಗೊಂಡ ಮೆಕ್ಕಾ-ಮದೀನಾ ಸ್ತಬ್ಧಚಿತ್ರಗಳ ಮೆರವಣಿಗೆ ಬಡೇ ಸಾಹೇಬ್ ದರ್ಗಾದಲ್ಲಿ ಸಮಾರೋಪಗೊಂಡಿತು. ಈದ್ ಮಿಲಾದ್ ಕಮಿಟಿಯಿಂದ ಕಂಪ್ಲಿಯ ಯಾಸೀನ್ ಮಸೀದಿಯ ಸ್ತಬ್ಧಚಿತ್ರಕ್ಕೆ ಮೊದಲ ಬಹುಮಾನ, ಸಕ್ಕರೆ ಕಾರ್ಖಾನೆಯ ಆಶ್ರಫಿ ಮಸೀದಿಯ ಸ್ತಬ್ಧಚಿತ್ರಕ್ಕೆ ಎರಡನೇ ಬಹುಮಾನ ನೀಡಲಾಯಿತು.

ಧರ್ಮಗುರುಗಳಾದ ಸೈಯ್ಯದ್‌ಷಾಹ್ ಅಬುತರಾಬ್ ಖಾದ್ರಿ, ಸೈಯ್ಯದ್ ಷಾಹ್ ಚಾಂದ್ ಪಾಷಾ ಖಾದ್ರಿ, ಸೈಯ್ಯದ್ ಷಾಹ್ ಡಾ.ನೂರ್‌ಅಹ್ಮದ್ ಖಾದ್ರಿ, ಸೈಯ್ಯದ್‌ಷಾಹ್ ಉಮೇಸ್ ಸಾಹೇಬ್, ಶಾಸಕ ಜೆ.ಎನ್.ಗಣೇಶ್, ಪುರಸಭಾಧ್ಯಕ್ಷ ಭಟ್ಟ ಪ್ರಸಾದ್, ಈದ್ ಮಿಲಾದ್ ಕಮಿಟಿ ಅಧ್ಯಕ್ಷ ಯು.ಜಹೀರುದ್ದೀನ್, ಉಪಾಧ್ಯಕ್ಷ ಎಂ.ನಾಸೀರುದ್ದೀನ್, ಪದಾಧಿಕಾರಿ ಬಿ.ಇಮ್ರಾನ್ ಖಾನ್, ಬಿ.ನೂರ್, ಅಬ್ದುಲ್ ಗಯಾಬ್, ಮೌಲ್ವಿಗಳು, ಮುತುವಲ್ಲಿಗಳು, ಹಾಫಿಸಾಬ್‌ಗಳು, ಇತರರಿದ್ದರು.