ಕಮತಗಿ ಪಟ್ಟಣದ ಹೊರವಲಯದಲ್ಲಿರುವ ಶುಭೋದಯ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಕಮತಗಿ ಕ್ಲಷ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಶುಭೋದಯ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ ಉದ್ಘಾಟಿಸಿದರು. ಕಮತಗಿ ಸಿಆರ್‌ಸಿ ಪಿ. ಎಸ್. ಚವ್ಹಾಣ್, ಸಂಸ್ಥೆಯ ನಿರ್ದೇಶಕ ಹುಚ್ಚಪ್ಪ ಸಿಂಹಾಸನ, ಮುಖ್ಯಶಿಕ್ಷಕ ಎ. ಆರ್. ಕಡ್ಲಮಟ್ಟಿ ಇತರರಿದ್ದರು. 
ಜಿಲ್ಲೆ

ಪ್ರತಿಭಾ ಕಾರಂಜಿ ಮಕ್ಕಳ ಬೆಳವಣಿಗೆಗೆ ಮುಖ್ಯ ವೇದಿಕೆ

ಕಮತಗಿ: ಮಕ್ಕಳಲ್ಲಿ ಅಡಗಿರುವ ಜ್ಞಾನ ಅನಾವರಣಗೊಳಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ಶುಭೋದಯ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಸಂಸ್ಥಾಪಕ ಅಧ್ಯಕ್ಷ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ ಹೇಳಿದರು.

ಪಟ್ಟಣದ ಹೊರವಲಯದಲ್ಲಿರುವ ಮಾತೋಶ್ರೀ ಬಂದವ್ವ ವೀರಪ್ಪ ಕಡ್ಲಿಮಟ್ಟಿ ಎಜ್ಯುಕೇಶನ್ ಮತ್ತು ರೂರಲ್ ಸೋಷಿಯಲ್ ವೆಲ್‌ೇರ್ ಟ್ರಸ್ಟ್‌ನ ಶುಭೋದಯ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜಿಪಂ, ಜಿಲ್ಲಾಡಳಿತ, ಶಾಲೆ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಹುನಗುಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ, ಕಮತಗಿ ಸಮೂಹ ಸಂಪನ್ಮೂಲ ಕೇಂದ್ರ, ಶುಭೋದಯ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಸಹಯೋಗದೊಂದಿಗೆ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಕಮತಗಿ ಕ್ಲಷ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಂದು ಮಗುವಿನಲ್ಲೂ ಒಂದೊಂದು ರೀತಿಯ ಜ್ಞಾನ, ಕಲೆ ಅವರಲ್ಲಿ ಅಡಗಿರುತ್ತದೆ. ಅದನ್ನು ಹೊರಹಾಕಲು ಇಂತಹ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಮುಖ್ಯ ವೇದಿಕೆಯಾಗಿವೆ. ಜತೆಗೆ ಮಕ್ಕಳು ಕೇವಲ ಪಠ್ಯಕಷ್ಟೇ ಸೀಮಿತರಾಗದೆ ಅವರಲ್ಲಿರುವ ವಿಭಿನ್ನವಾದ ಜ್ಞಾನ ಕೌಶಲ ತೋರಿಸಲು ಇದು ಉತ್ತಮ ಅವಕಾಶವಾಗಿದೆ ಎಂದು ತಿಳಿಸಿದರು.

ಕಮತಗಿ ಸಿಆರ್‌ಸಿ ಪಿ. ಎಸ್. ಚವ್ಹಾಣ್ ಮಾತನಾಡಿದರು.

ಸಂಸ್ಥೆಯ ನಿರ್ದೇಶಕ ಹುಚ್ಚಪ್ಪ ಸಿಂಹಾಸನ, ಮುಖ್ಯಶಿಕ್ಷಕ ಎ. ಆರ್. ಕಡ್ಲಿಮಟ್ಟಿ, ಎಸ್. ಬಿ. ತುಂಬರಗುದ್ದಿ, ಎ. ಆರ್. ರಾಯಬಾಗಿ, ಸಂಜೀವ ದೇಸಾಯಿ ಸೇರಿ ವಿವಿಧ ಶಾಲೆಯ ಶಿಕ್ಷಕರು ಮತ್ತು ಕ್ಲಷ್ಟರಮಟ್ಟದ 17 ಶಾಲೆಯ ಮಕ್ಕಳು ಭಾಗವಹಿಸಿದ್ದರು.