ರಾಯಬಾಗ: ತಾಲೂಕಿನ ಚಿಂಚಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕಚೇರಿ ಬೀಗ ಮುರಿದು ಪ್ರಮುಖ ದಾಖಲೆ ಪತ್ರಗಳು ಹಾಗೂ ಕಡತಗಳನ್ನು ಕಳ್ಳತನ ಮಾಡಿದ ಘಟನೆ ಗುರುವಾರ ನಡೆದಿದೆ. ಎಂದಿನಂತೆ ಸಿಪಾಯಿ ಬೆಳಗ್ಗೆ ಕೆಲಸಕ್ಕೆಂದು ಬಂದಾಗ ವಿಷಯ ಗೊತ್ತಾಗಿದೆ.
ಬಳಿಕ ದೂರವಾಣಿ ಮೂಲಕ ಮುಖ್ಯಾಧಿಕಾರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಕುಡಚಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಗುರುವಾರ ಬೆಳಗಿನ ರಾಯಬಾಗ ಪಟ್ಟಣದ ಬಾಹುಬಲಿ ಮೊಬೈಲ್ ಅಂಗಡಿ ಶೆಟರ್ ಬಾಗಿಲು ಮುರಿದ ಕಳ್ಳರು ಮೊಬೈಲ್‌ಗಳು, ಪಾವರ್ ಬ್ಯಾಂಕ್, ಏರ್ ಬಡ್ಸ್ ಸೇರಿ 3-4 ಲಕ್ಷ ರೂ. ಮೌಲ್ಯದ ಸಾಮಗ್ರಿಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾತ್ರಿ 2 ಗಂಟೆ ಸುಮಾರಿಗೆ ಇಬ್ಬರು ಮುಸುಕುಧಾರಿಗಳು ಬೈಕ್ ಮೇಲೆ ಬಂದು ಕಳ್ಳತನ ಮಾಡಿರುವ ದಶ್ಯಗಳು ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.
ಗೋಕಾಕ ವರದಿ: ಗೋಕಾಕದ ವಿದ್ಯಾನಗರ ನಗರದಲ್ಲಿರುವ ವ್ಯಾಪಾರಸ್ಥ ಶ್ರೀರಾಮ ಚೌಧರಿ ಮನೆಯಲ್ಲಿದ್ದ 700 ಗ್ರಾಂ ಚಿನ್ನಾಭರಣ ಬುಧವಾರ ಕಳ್ಳತನವಾಗಿದೆ. ಸಿಪಿಐ ಸುರೇಶಬಾಬು ಬಂಡಿವಡ್ಡರ, ನಗರ ಪಿಎಸ್‌ಐ ಕೆ.ವಾಲಿಕಾರ ಸ್ಥಳ ಪರಿಶೀಲಿಸಿ ಕಳ್ಳರ ಪತ್ತೆಗೆ ಶೋಧ ನಡೆಸಿದ್ದಾರೆ.