ಚಿತ್ರದುರ್ಗ:ಪದ್ಮಶ್ರೇಣಿ ಪ್ರಶಸ್ತಿಗಳಿಗೆ ಸಂಬಂಧಿಸಿದ ಶಿಫಾರಸ್ಸು ಪ್ರಸ್ತಾವನೆಗಳನ್ನು ಆಗಸ್ಟ್ 31ರೊಳಗೆ ಆಹ್ವಾನಿಸಲಾಗಿದೆ.ಕಲೆ,ಸಾಹಿತ್ಯ ಮತ್ತು ಶಿಕ್ಷಣ,ಕ್ರೀಡೆ,ವೈದ್ಯಕೀಯ,ಸಮಾಜಸೇವೆ, ವಿಜ್ಞಾನ ಮತ್ತು ಇಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರಗಳನ್ನು,ನಾಗರೀಕ ಸೇವೆ, ವ್ಯಾಪಾರ ಮತ್ತು ಕೈಗಾರಿಕೆ ಇತ್ಯಾದಿ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ 2025ನೇ ಸಾಲಿನ ಪದ್ಮಶ್ರೇಣಿಯ ಪ್ರಶಸ್ತಿಗಳಾದ ಪದ್ಮ ವಿಭೂಷಣ,ಪದ್ಮ ಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ಗಣರಾಜ್ಯೊತ್ಸವ ಹಿಂದಿನ ದಿನದಂದು ಕೇಂದ್ರ ಸರ್ಕಾರ ಪ್ರಕಟಿಸಲಿದೆ. 2025ನೇ ಸಾಲಿನ ಪದ್ಮ ಶ್ರೇಣಿ ಪ್ರಶಸ್ತಿಗಳಿಗೆ ಅನ್ವಯಿಸುವ ನಿಯಮಾವಳಿಗಳು . https://padmaawards.gov.inಲಭ್ಯವಿದೆ ಹೆಚ್ಚಿನ ಮಾಹಿತಿಗೆ ಕ್ರೀಡಾ ಇಲಾಖೆಯಿಂದ ಪಡೆಯಬಹುದೆಂದು ಪ್ರಕಟಣೆ ತಿಳಿಸಿದೆ.