ಸಿಂದಗಿ: ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಶಿಕ್ಷಣ ಕೇಂದ್ರದಲ್ಲಿ ಕಷ್ಟಪಟ್ಟು ಓದಿದ ನೂರಾರು ವಿದ್ಯಾರ್ಥಿಗಳು ಸಾಧನೆಗೈದು ವಿದ್ಯಾಕಾಶಿ ಎಂಬ ಹೆಸರು ತಂದಿದ್ದಾರೆ ಎಂದು ಸಂಘವಿ ನೆಹರೂ ಪೋರವಾಲ ಹೇಳಿದರು.
ಪಟ್ಟಣದ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಪದ್ಮರಾಜ ಮಹಿಳಾ ಸ್ವತಂತ್ರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿಪೂರ್ವ ಕಾಲೇಜಿನ ಸಭಾಭವನದಲ್ಲಿ ಭಾನುವಾರ ಪಠ್ಯಪೂರಕ ಚಟುವಟಿಕೆಗಳ ಕಾರ್ಯಕ್ರಮ ಹಾಗೂ ಸಾಧಕ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದ ಯಶಸ್ಸಿಗೆ ನಮ್ಮ ಓದು, ವಿಷಯ ಗ್ರಹಿಕೆಯ ಜತೆಗೆ ಹಿಂದೆ ಗುರು, ಮುಂದೆ ಜೀವನದ ಗುರಿ ಇರಬೇಕು. ಮಹಿಳೆಯರು ಓದಿನತ್ತ ಹೆಚ್ಚು ಆಸಕ್ತಿ ವಹಿಸಿ ಶೈಕ್ಷಣಿಕ ಸಾಧಕರಾಗಬೇಕು ಎಂದರು.
ಪತ್ರಕರ್ತ ಪ್ರೊ. ಶಾಂತೂ ಹಿರೇಮಠ ಮಾತನಾಡಿ, ಇದು ಜ್ಞಾನದ ಯುಗ. ಶಿಕ್ಷಣವಿಲ್ಲದಿದ್ದರೆ ಬದುಕಲ್ಲಿ ಏನೂ ಇಲ್ಲ. ಲಿಂಗೈಕ್ಯ ಚನ್ನವೀರ ಸ್ವಾಮೀಜಿಗಳ ಪಾವನನಾಡಿನಲ್ಲಿರುವ ನಾವುಗಳು ಪುಣ್ಯವಂತರು. ಶಿಕ್ಷಕರು ತಮ್ಮ ಸಮರ್ಪಣಾಭಾವದಿಂದ ವಿದ್ಯೆ ನೀಡುತ್ತಿದ್ದಾರೆ. ವಿದ್ಯಾರ್ಥಿನಿಯರು ಅವರ ಮಾರ್ಗದರ್ಶನದಿಂದ ಸಾಧನೆ ತೋರಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಆಶೀರ್ವಚನ ನೀಡಿದರು. ಸಂಸ್ಥೆಯ ಸಹ ಕಾರ್ಯದರ್ಶಿ ಅಶೋಕ ವಾರದ, ಪ್ರಾಚಾರ್ಯ ಎಂ.ಎಸ್. ಹೈಯಾಳಕರ ಮಾತನಾಡಿದರು.
ಉಪನ್ಯಾಸಕ ಮಹಾಂತೇಶ ನೂಲಾನವರ, ಜಿ.ಎ. ನಂದಿಮಠ, ಜಿ.ಎಸ್. ಕುಲಕರ್ಣಿ, ಸಾಯಬಣ್ಣ ಸಜ್ಜನ, ರೇವಣಸಿದ್ದ ಹಾಲಕೇರಿ, ಪಿ.ಎಂ. ಮಾಲಿಪಾಟೀಲ, ಅನಿಲಕುಮಾರ ರಜಪೂತ, ಎಸ್.ಎಂ. ಹೂಗಾರ, ಎಂ.ಕೆ. ಬಿರಾದಾರ, ಎಸ್.ಸಿ. ದುದ್ದಗಿ, ಎಲ್.ಎಂ. ಮಾರ್ಸನಳ್ಳಿ, ಹೇಮಾ ಕಾಸರ, ಹೇಮಾ ಹಿರೇಮಠ, ಜಿ.ವಿ. ಪಾಟೀಲ, ವರ್ಷಾ ಪಾಟೀಲ, ಎಂ.ಪಿ. ಸಾಗರ, ಶ್ರೀದೇವಿ ದುದ್ದಗಿ, ಬಸಮ್ಮ ಧರಿ, ಯು.ಸಿ. ಪೂಜೇರಿ, ಎ.ಎ. ಕೊಕನಿ, ಮಂಗಳಾ ಈಳಗೇರ, ಸತೀಶ ಕಕ್ಕಸಗೇರಿ, ಡಿ.ಎಂ. ಪಾಟೀಲ, ಮಮತಾ ಹರನಾಳ, ಶಂಕರ ಕುಂಬಾರ, ವಿಜಯಲಕ್ಷ್ಮಿ ಭಜಂತ್ರಿ ಹಾಗೂ ಮಹಾವಿದ್ಯಾಲಯದ ಬೋಧಕೇತರ ಸಿಬ್ಬಂದಿಯಿದ್ದರು.