ಮೈಸೂರು: ಪದೇ ಪದೆ ನಗರ ಪಾಲಿಕೆ ಕೌನ್ಸಿಲ್ ಸಭೆ ಮುಂದೂಡುತ್ತಿರುವುದರಿಂದ ದಲಿತ ಸಮುದಾಯಕ್ಕೆ ಸೇರಿದ ವಿಳ್ಯದೆಲೆ ಬೆಳೆಗಾರರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಮಾಜಿ ಉಪ ಮೇಯರ್ ಶ್ರೀಧರ್, ನಗರ ಪಾಲಿಕೆ ಬಿಎಸ್‌ಪಿ ಸದಸ್ಯೆ ಪಲ್ಲವಿ ಬೇಗಂ ನೇತೃತ್ವದಲ್ಲಿ ವಿಳ್ಯದೆಲೆ ಬೆಳೆಗಾರರು ಪಾಲಿಕೆ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
245 ವಿಳ್ಯದೆಲೆ ಬೆಳೆಗಾರರಿಗೆ ಸೂಯೇಜ್ ಫಾರ್ಮ್‌ನಲ್ಲಿ ತಲಾ 5 ಗುಂಟೆ ಜಾಗ ಹಂಚಿಕೆ ಮಾಡಲು ಸರ್ಕಾರ ಅನುಮೋದನೆ ನೀಡಿದ್ದರೂ ನಗರ ಪಾಲಿಕೆ ಹಲವು ವರ್ಷಗಳಿಂದ ಈ ವಿಷಯಕ್ಕೆ ಅನುಮೋದನೆ ನೀಡದೆ ಅನ್ಯಾಯ ಮಾಡುತ್ತಿದೆ. ಇದೀಗ ಮೇಯರ್ ಸಭೆಗಳನ್ನು ನಡೆಸದೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಪಲ್ಲವಿ ಬೇಗಂ ಅಸಮಾಧಾನ ವ್ಯಕ್ತಪಡಿಸಿದರು.