ಜಿಲ್ಲೆ

ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಾಳೆ

ಗೋಕಾಕ: ಇಲ್ಲಿನ ರೋಟರಿ ಸಂಸ್ಥೆ ಹಾಗೂ ಇನ್ನರ್​ವ್ಹೀಲ್​ 2024&25ರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು.14ರಂದು ಬೆಳಗ್ಗೆ 10 ಗಂಟೆಗೆ ನಗರದ ಡಾ.ಬಿ.ಸಿ.ಆಜರೆ ಮೆಮೊರಿಯಲ್​ ರೋಟರಿ ರಕ್ತ ಭಂಡಾರ ಸಭಾಭವನದಲ್ಲಿ ಜರುಗಲಿದೆ.

ರೋಟರಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಡಾ.ಸಿದ್ದಣ್ಣ ಕಮತ, ಕಾರ್ಯದರ್ಶಿಯಾಗಿ ರಾಜಶೇಖರ ಮುನ್ನವಳ್ಳಿಮಠ, ಖಜಾಂಚಿಯಾಗಿ ಸತೀಶ ಜಾಧವ ಹಾಗೂ ಇನ್ನರ್​ವ್ಹೀಲ್​ ಸಂಸ್ಥೆ ಅಧ್ಯಕ್ಷರಾಗಿ ಜಯಶ್ರೀ ಕಮತ, ಕಾರ್ಯದರ್ಶಿಯಾಗಿ ಅನುಪಾ ಕೌಶಿಕ, ಖಜಾಂಚಿಯಾಗಿ ಗಿರಿಜಾ ಮುನ್ನವಳ್ಳಿಮಠ ಹಾಗೂ ಇತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಲಿದ್ದಾರೆ. ೂಡಗೇರಿಯ ಮಲ್ಲಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ರೋಟರಿ ಮಾಜಿ ಪ್ರಾಂತಪಾಲ ಅವಿನಾಶ ಪೋತದಾರ, ಬೆಳಗಾವಿ ಇನ್ನರ್​ವ್ಹೀಲ್​ ಸಂಸ್ಥೆ ಮಾಜಿ ಅಧ್ಯೆ ರೂಪಾ ಪೋತದಾರ, ಸಹಾಯಕ ಪ್ರಾಂತಪಾಲ ಮಹೇಶ ಬೆಲ್ಲದ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
ಲಯನ್ಸ್​ ಸಂಸ್ಥೆ ಸಮಾರಂಭ: ಗೋಕಾಕ ನಗರದ ಲಯನ್ಸ್​ ಸಂಸ್ಥೆಯ 2024&25ರ ಸಾಲಿನ ನೂತನ ಪದಾಧಿಕಾರಿಗಳ ಅಧಿಕಾರ ಪದಗ್ರಹಣ ಸಮಾರಂಭವು ಜು.14ರಂದು ಸಂಜೆ 6 ಗಂಟೆಗೆ ನಗರದ ಸಮುದಾಯ ಭವನದಲ್ಲಿ ಜರುಗಲಿದೆ. ಲಯನ್ಸ್​ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಅಶೋಕ ಲಗಮಪ್ಪಗೋಳ, ಕಾರ್ಯದರ್ಶಿಯಾಗಿ ಸುರೇಶ ಶಿಂಧಿಹಟ್ಟಿ, ಖಜಾಂಚಿಯಾಗಿ ಪ್ರಶಾಂತ ಅಂಕದವರ ಹಾಗೂ ಇತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಲಿದ್ದಾರೆ. ಲಯನ್ಸ್​ ಸಂಸ್ಥೆಯ ಭಾರತಿ ವಾಡವಿ ಹಾಗೂ ಬಿ.ಬಿ.ನಂದ್ಯಾಲ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ನಿಕಟಪೂರ್ವ ಅಧ್ಯಕ್ಷ ಡಾ.ಅಶೋಕ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.