ಜಿಲ್ಲೆ

ಪದವೀಧರರಲ್ಲಿ ವೃತ್ತಿಪರ ಜ್ಞಾನ, ತರಬೇತಿ ಕೊರತೆ

Kalaburagi

ಕಲಬುರಗಿ: ವೃತ್ತಿಪರ ಜ್ಞಾನ, ತರಬೇತಿ ಕೊರತೆಯಿಂದ ಪದವೀಧರರು ಭವಿಷ್ಯಕ್ಕಾಗಿ ಪರದಾಡಬೇಕಾದ ಪ್ರಸಂಗ ಎದುರಾಗಿದೆ ಎಂದು ಸಾಮಾಜಿಕ ಮತ್ತು ಆಥರ್ಿಕ ಬದಲಾವಣೆ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಸ್. ಮಾದೇಶ್ವರನ್ ಕಳವಳ ವ್ಯಕ್ತಪಡಿಸಿದ್ದಾರೆ.
ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ 38ನೇ ಘಟಿಕೋತ್ಸವದಲ್ಲಿ ಭಾರತದಲ್ಲಿ ಉನ್ನತ ಶಿಕ್ಷಣದ ಸಾಮಥ್ರ್ಯ, ಅವಕಾಶ, ಉದ್ಯೋಗ ಮತ್ತು ಗುಣಾತ್ಮಕತೆ ವಿಷಯ ಕುರಿತು ಆನ್ಲೈನ್ ಭಾಷಣ ಮಾಡಿದ ಅವರು, ಪದವಿ ಪೂರೈಸಿ ಹೊರಹೋಗುವ ಪದವೀಧರರಿಗೆ ಮುಂದೇನು ಎಂಬ ಸ್ಪಷ್ಟತೆ ಇರುವುದಿಲ್ಲ. ಮೂರು ವರ್ಷದ ಪದವಿಗಳಲ್ಲಿ ಉದ್ಯೋಗ ಅರ್ಹತೆ, ಕೌಶಲ ಮತ್ತು ಪರಿಣತಿ ಕಡಿಮೆ ಕಂಡುಬರುತ್ತಿದೆ ಎಂದು ಹೇಳಿದರು.
ಎಐಸಿಟಿಇ ಅಂಕಿ-ಅಂಶಗಳ ಪ್ರಕಾರ, ದಾಖಲಾದ 1,84 ಮಿಲಿಯನ್ ವಿದ್ಯಾರ್ಥಿಗಳಲ್ಲಿ ಕೇವಲ ಶೇ.33 (615539) ವಿದ್ಯಾಥರ್ಿಗಳಿಗೆ 2016-17ರಲ್ಲಿ ಉದ್ಯೋಗಾವಕಾಶ ದೊರೆತಿದೆ. ಭಾರತ ಸರ್ಕಾರದ ಉದ್ಯೋಗ, ನಿರುದ್ಯೋಗದ ಸಮೀಕ್ಷೆ ಪ್ರಕಾರ ಶೈಕ್ಷಣಿಕ ಮಟ್ಟದ ಜತೆಗೆ ನಿರುದ್ಯೋಗಿಗಳು ಹೆಚ್ಚಾಗುತ್ತಿದ್ದಾರೆ. ನಿರುದ್ಯೋಗ ಸಮಸ್ಯೆ 15 ವರ್ಷ ಮೇಲ್ಪಟ್ಟವರಲ್ಲಿ ಶೇ.6, ಪದವೀಧರರಲ್ಲಿ ಶೇ.17.2 ಮತ್ತು ಉನ್ನತ ಶಿಕ್ಷಣ ಪಡೆದವರಲ್ಲಿ ಶೇ.14.1ರಷ್ಟು ಕಾಡುತ್ತಿದೆ. ಇತ್ತೀಚೆಗೆ ಪದವಿ ಪಡೆದವರಲ್ಲಿ ತಾಂತ್ರಿಕ ಕೌಶಲ ಕೊರತೆ ಕಂಡುಬಂದಿದೆ. ಮೂರು ವರ್ಷದ ಪದವಿ ಪಡೆದವರು ಕನಿಷ್ಠ ಉದ್ಯೋಗ ಗಿಟ್ಟಿಸಿರುವುದು ಕಂಡುಬಂದಿದೆ ಎಂದರು.
ಭಾರತದ ಉನ್ನತ ಶಿಕ್ಷಣ ವಲಯವು ಜಾಗತಿಕ ಮಟ್ಟದ ಶ್ರೇಷ್ಠ ಪ್ರತಿಭೆಗಳನ್ನು ನಿರ್ಮಿಸಿದೆ. ಮೈಕ್ರೋಸಾಫ್ಟ್, ಗೂಗಲ್, ಮಾಸ್ಟರ್ ಕಾರ್ಡ ಮತ್ತು ಅಡೋಬ್ನಂತಹ ಪ್ರಮುಖ ಫಾರ್ಚೂನ್-500 ಕಂಪನಿಗಳ ಮುಖ್ಯ ಆಡಳಿತಾಧಿಕಾರಿಗಳು ಭಾರತದ ಉನ್ನತ ಶಿಕ್ಷಣದ ಕೊಡುಗೆಯಾಗಿದ್ದಾರೆ. 2009-10ರಲ್ಲಿದ್ದ 436 ವಿಶ್ವವಿದ್ಯಾಲಯಗಳು 2017-18ರಲ್ಲಿ 903ಕ್ಕೆ ಏರಿಕೆಯಾಗಿವೆ. ಇದೇ ಅವಧಿಯಲ್ಲಿ 26 ಸಾವಿರ ಇದ್ದ ಮಹಾವಿದ್ಯಾಲಯಗಳ ಸಂಖ್ಯೆ 39000ಕ್ಕೆ ಏರಿಕೆಯಾಗಿದೆ ಎಂದರು.
ಕುಲಸಚಿವರಾದ ಪ್ರೊ.ಸಿ. ಸೋಮಶೇಖರ, ಪ್ರೊ. ಸಂಜೀವಕುಮಾರ ಕೆ.ಎಂ., ಡೀನ್ಗಳಾದ ಪ್ರೊ.ಎಚ್.ಟಿ. ಪೋತೆ, ಪ್ರೊ.ಪಿ.ವಿ. ಹುನಗುಂದ, ಪ್ರೊ.ರಮೇಶ ಅಂಗಡಿ, ಪ್ರೊ.ಹೂವಿನಭಾವಿ ಬಾಬಣ್ಣ, ಡಾ.ದೇವಿದಾಸ ಮಾಲೆ, ಸಿಂಡಿಕೇಟ್, ಅಕಾಡೆಮಿಕ್ ಕೌನ್ಸಿಲ್ ಸದಸ್ಯರು ಸೇರಿ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು ಪಾಲ್ಗೊಂಡಿದ್ದರು.
ಕುಲಪತಿ ಪ್ರೊ.ಚಂದ್ರಕಾಂತ ಯಾತನೂರ ಸ್ವಾಗತಿಸಿದರು. ಚಿನ್ನದ ಪದಕ ಪಡೆದವರು, ಪಿಎಚ್ಡಿ ಪದವೀಧರರಿಗೆ ಪ್ರಮಾಣಪತ್ರ, ಚಿನ್ನದ ಪದಕ, ನಗದು ಬಹುಮಾನ ವಿತರಿಸಿ ಪ್ರೋತ್ಸಾಹಿಸಲಾಯಿತು. ನಾಡಗೀತೆ ಹಾಗೂ ವಿಶ್ವವಿದ್ಯಾಲಯದ ಗೀತೆಗಳನ್ನು ವಿವಿಯ ಸಂಗೀತ ವಿಭಾಗದ ವಿದ್ಯಾಥರ್ಿ-ವಿದ್ಯಾಥರ್ಿನಿಯರು ಸುಶ್ರಾವ್ಯವಾಗಿ ಹಾಡಿದರು. ಕಾರ್ಯಕ್ರಮಕ್ಕೂ ಮುನ್ನ ಹಾಗೂ ಕಾರ್ಯಕ್ರಮದ ನಂತರ ಘಟಿಕೋತ್ಸವ ಮೆರವಣಿಗೆ ನಡೆಯಿತು.