ಜಿಲ್ಲೆ

ಪದವೀಧರ ಚುನಾವಣೆಗೆ ಸಿದ್ಧತೆ ಪೂರ್ಣ

ಚನ್ನಬಸಯ್ಯ ಗುರುವಿನ

ಯಾದಗಿರಿ : ಈಶಾನ್ಯ ಪದವೀಧರ ಮತಕ್ಷೇತ್ರದ ಚುನಾವಣೆ ಸೋಮವಾರ ನಡೆಯಲಿದ್ದು, ಇದಕ್ಕಾಗಿ ಜಿಲ್ಲೆಯಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಹೇಳಿದರು.


ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಂದು ನಡೆಯುವ ಚುನಾವಣೆಗಾಗಿ ಜಿಲ್ಲೆಯಲ್ಲಿ ಒಟ್ಟು ೧೬ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಬೆಳಗ್ಗೆ ೮ಕ್ಕೆ ಮತದಾನ ಆರಂಭವಾಗಿ ಸಂಜೆ ೪ಕ್ಕೆ ಮುಕ್ತಾಯವಾಗಲಿದೆ ಎಂದರು.

ಮತಗಟ್ಟೆಗಳ ವಿವರ : ಸರ್ಕಾರಿ ಪದವಿಪೂರ್ವ ಕಾಲೇಜು ಕಕ್ಕೇರಾ, ಸರ್ಕಾರಿ ಪದವಿಪೂರ್ವ ಕಾಲೇಜು ಕೆಂಭಾವಿ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (ಎಡಭಾಗ), ಪೊಲೀಸ್ ಕಾಲನಿ ಶೋರಾಪುರ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (ಬಲಭಾಗ), ಪೊಲೀಸ್ ಕಾಲನಿ ಶೋರಾಪುರ, ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು(ಎಡಭಾಗ) ಶಹಾಪುರ, ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು (ಬಲಭಾಗ) ಶಹಾಪುರ, ಸರ್ಕಾರಿ ಪದವಿಪೂರ್ವ ಕಾಲೇಜು ಗೋಗಿ (ಕೆ), ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಹೊಸ ಕಟ್ಟಡ ದೋರನಹಳ್ಳಿ, ಸರ್ಕಾರಿ ಪದವಿಪೂರ್ವ ಕಾಲೇಜು ಯಾದಗಿರಿ, ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢ ವಿಭಾಗ(ಬಲಭಾಗ) ಯಾದಗಿರಿ, ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢ ವಿಭಾಗ (ಎಡಭಾಗ) ಯಾದಗಿರಿ, ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು,(ಎಡಭಾಗ) ಗುರುಮಠಕಲï, ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು,( ಬಲಭಾಗ), ಸರ್ಕಾರಿ ಪ್ರೌಢಶಾಲೆ(ಬಲಭಾಗ) ವಡಗೇರಾ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಯುಕೆಪಿ ಕ್ಯಾಂಪ್ ಹುಣಸಗಿ ಮತ್ತು ಸರ್ಕಾರಿ ಬಾಲಕಿಯ ಪ್ರೌಢಶಾಲೆ ಕೊಡೇಕಲ್‌ನಲ್ಲಿ ಮತಗಟ್ಟೆ ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.


ಜಿಲ್ಲೆಯಲ್ಲಿ ಒಟ್ಟು ೧೪೮೪೨ ಮತದಾರರು ಇದ್ದು, ಇವರಲ್ಲಿ ೧೦೧೯೨ ಪುರುಷ ಮತ್ತು ೪೬೪೭ ಮಹಿಳಾ ಮತದಾರರಿz್ದÁರೆ. ಶೇ.೯೮ ಮತದಾರರ ಮಾಹಿತಿ ಪತ್ರ ವಿತರಿಸಲಾಗಿದೆ. ಶೋರಾಪುರ, ಹುಣಸಗಿ, ಶಹಾಪುರ, ವಡಗೇರಾ, ಯಾದಗಿರಿ ಮತ್ತು ಗುರುಮಠಕಲï ತಹಸಿಲï ಕಚೇರಿಗಳಲ್ಲಿ ಮಸ್ಟರಿಂಗ್ ಮತ್ತು ಡಿ-ಮಸ್ಡರಿಂಗ್ ಕೇಂದ್ರ ತೆರೆಯಲಾಗಿದೆ ಎಂದು ಹೇಳಿದರು.


ಸುರಪುರ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಜೂ.೪ರಂದು ಬೆಳಗ್ಗೆ ೮ರಿಂದ ಯಾದಗಿರಿ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ಇದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಮತದಾರರು ಬಳಸುವ ದಾಖಲೆಗಳು: ಆಧಾರ್ ಕಾರ್ಡ್, ವಾಹನ ಚಾಲನಾ ಪರವಾನಿಗೆ, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಗುರುತಿನ ಚೀಟಿ ( ರಾಜ್ಯ ಮತ್ತು ಕೇಂದ್ರ ಸರ್ಕಾರ/ಸಾರ್ವಜನಿಕ ಉದ್ದಿಮೆ/ ಸ್ಥಳೀಯ ಸಂಸ್ಥೆಗಳು ಅಥವಾ ಖಾಸಗಿ ಕೈಗಾರಿಕಾ ಸಂಸ್ಥೆಗಳು), ಕಚೇರಿ ಗುರುತಿನ ಚೀಟಿ (ಲೋಕಸಭಾ ಸದಸ್ಯ/ವಿಧಾನ ಸಭಾ ಸದಸ್ಯ/ವಿಧಾನ ಪರಿಷತ್ ಸದಸ್ಯರು), ಪದವೀಧರ ಕ್ಷೇತ್ರದ ನೌಕರರಿಗೆ ಶಿಕ್ಷಣ ಇಲಾಖೆ ನೀಡಿದ ಸೇವಾ ಗುರುತಿನ ಚೀಟಿ, ವಿಶ್ವ ವಿದ್ಯಾಲಯದಿಂದ ನೀಡಲಾದ ಮೂಲ ಪದವಿ/ಡಿಪ್ಲೊಮಾ ಪ್ರಮಾಣ ಪತ್ರ, ಅಂಗವಿಕಲ ವ್ಯಕ್ತಿಗಳಿಗೆ ಅಧಿಕೃತ ಪ್ರಾಧಿಕಾರ ನೀಡಿದ ಮೂಲ ಪ್ರಮಾಣ ಪತ್ರ ಮತ್ತು ಭಾರತ ಸರ್ಕಾರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಿಂದ ಅಂಗವಿಕಲರಿಗೆ ನೀಡಲಾದ ವಿಶಿಷ್ಠ ಗುರುತಿನ ಚೀಟಿಗಳಲ್ಲಿ ಯಾವುದಾದರು ಒಂದು ತೋರಿಸಿ ಮತ ಚಲಾಯಿಸಬಹುದಾಗಿದೆ.

ಮತ ಚಲಾವಣೆಗೆ ನೇರಳೆ ಪೆನ್ನು: ಮತದಾರರು ಚುನಾವಣಾ ಆಯೋಗದಿಂದ ನೀಡಲಾಗಿರುವ ನೇರಳೆ ಬಣ್ಣದ ಪೆನ್ನಿನ ಮೂಲಕ ಮಾತ್ರ ಪ್ರಾಶ್ಯಸ್ತ್ಯದ ಮತ ಚಲಾಯಿಸಬೇಕು.; ಕ್ರಮ ಸಂಖ್ಯೆಯನ್ನು ಕೈಬಿಟ್ಟು ಮತ ಚಲಾಯಿಸಲಾದ ಮತಗಳು ಅಮಾನ್ಯಗೊಳ್ಳಲಿವೆ ಹಾಗೂ ಬೇರೆ ರೀತಿಯಿಂದ ಗುರುತುಗಳನ್ನೊಳಗೊಂಡ ಚಲಾಯಿಸಿದ ಮತಗಳು ಅಮಾನ್ಯವಾಗಲಿವೆ ಎಂದರು.