ಜಿಲ್ಲೆ

ಪದವಿ ಜತೆಗೆ ವ್ಯಕ್ತಿತ್ವ ವಿಕಸನವೂ ಮುಖ್ಯ

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳು ಪದವಿ ಪಡೆಯುವುದರ ಜತೆಗೆ ವ್ಯಕ್ತಿತ್ವ ವಿಕಸನ ಹೊಂದಬೇಕು ಎಂದು ಎಸ್‌ಡಿಎಂ ವಿವಿ ಉಪ ಕುಲಪತಿ ಡಾ. ನಿರಂಜನಕುಮಾರ ಹೇಳಿದರು.
ಎಸ್‌ಡಿಎಂ ವಿಶ್ವ ವಿದ್ಯಾಲಯ ಮತ್ತು ಮುಂಬೈನ ಎಂ.ಆರ್. ಪೈ ಪ್ರತಿಷ್ಠಾನ ವತಿಯಿಂದ ಎಸ್‌ಡಿಎಂ ವಿವಿಯ ಆಯ್ದ ವಿದ್ಯಾರ್ಥಿಗಳಿಗೆ ಎರಡು ದಿನಗಳ ಕಾಲ ಏರ್ಪಡಿಸಿದ್ದ ನಾಯಕತ್ವ ತರಬೇತಿ ಶಿಬಿರಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮಲ್ಲಿರುವ ಸಾಮರ್ಥ್ಯ ಬಳಸಿಕೊಂಡು ನಾಳಿನ ಶ್ರೇಷ್ಠ ನಾಯಕರಾಗುವತ್ತ ಮುನ್ನಡೆಯಬೇಕು. ನೈಜ ನಾಯಕರಲ್ಲಿ ದೂರದೃಷ್ಟಿತ್ವ ಗುಣ ಇರಬೇಕು. ಉತ್ತಮ ನಾಯಕರೆಲ್ಲ ಸದಾ ದೇಶದ ಪ್ರಗತಿ ಬಗ್ಗೆ ಯೋಚಿಸಬೇಕು. ಉತ್ತಮ ವರ್ತನೆ, ಪ್ರೇರಣೆ ಮತ್ತು ಸೃಜನಶೀಲತೆ ಉತ್ತಮ ನಾಯಕರು ಅನುಸರಿಸಬೇಕಾದ ಪ್ರಮುಖ ಅಂಶಗಳು ಎಂದರು.
ವಿವೇಕ ಪತ್ಕಿ, ಸಚಿನ ಕಾಮತ್ ಅವರು ನಾಯಕತ್ವ ತರಬೇತಿ ಕಾರ್ಯಕ್ರಮದ ಉದ್ದೇಶ ಮತ್ತು ಪ್ರತಿಷ್ಠಾನ ಕುರಿತು ಮಾಹಿತಿ ನೀಡಿದರು. ಸಹ ಉಪ ಕುಲಪತಿ ಡಾ. ಎಸ್. ಕೆ. ಜೋಶಿ, ವೈದ್ಯಕೀಯ ಅಧೀಕ್ಷಕ ಡಾ. ಕಿರಣ ಹೆಗ್ಡೆ, ಬಾಬಣ್ಣ ಶೆಟ್ಟಿಗಾರ, ಇತರರು ಇದ್ದರು.