ಜಿಲ್ಲೆ

ಪದಗ್ರಹಣ ಸಮಾರಂಭ ನಾಳೆ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಲಯನ್ಸ್​ ಕ್ಲಬ್​ ಧಾರವಾಡದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಜು. 7ರಂದು ಸಂಜೆ 6.30ಕ್ಕೆ ಸತ್ತೂರಿನ ಟ್ರಾವಲ್​ ಇನ್​ ಹೋಟೆಲ್​ನಲ್ಲಿ ಏರ್ಪಡಿಸಲಾಗಿದೆ ಎಂದು ನೂತನ ಅಧ್ಯಕ್ಷ ಗುರುರಾಜ ಪಿಸೆ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಲಯನ್​ ಸಂಸ್ಥೆಯ ಜಿಲ್ಲಾ ಮಾಜಿ ಗವರ್ನರ್​ ಡಾ. ರವಿ ಹೆಗಡೆ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ. ಮಾಜಿ ಗವರ್ನರ್​ ಹರ್ಷ ದೇಸಾಯಿ ಆಗಮಿಸಲಿದ್ದಾರೆ. ಪ್ರಸಕ್ತ ಸಾಲಿನ ವಿವಿಧ ವಿನೂತನ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಮುಂದಿನ ದಿನಗಳಲ್ಲಿ ಲಾರಿ, ಟ್ಯಾಕ್ಸಿ ಚಾಲಕರಿಗೆ ಕಣ್ಣಿನ ತಪಾಸಣೆ, ಮಧುಮೇಹ ಜಾಗೃತಿ ಶಿಬಿರ, ಯುವ ಜನಾಂಗ ಮಾದಕ ವಸ್ತುಗಳ ಸೇವನೆಯಿಂದ ದೂರವಿರುವಂತೆ ಶಾಲೆ&ಕಾಲೇಜುಗಳಲ್ಲಿ ಜಾಗೃತಿ ಅಭಿಯಾನ, ಕಾಮಿರ್ಕರಿಗೆ ಸುರಕ್ಷತೆ ತಿಳಿವಳಿಕೆ ಸೇರಿ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಡಾ. ಅನಿರುದ್ಧ ಕುಲಕಣಿರ್ ಮಾತನಾಡಿ, ನೂತನ ಅಧ್ಯಕ್ಷರಾಗಿ ಗುರುರಾಜ ಪಿಸಿ, ಕಾರ್ಯದರ್ಶಿಯಾಗಿ ಕವಿತಾ ಅಂಗಡಿ, ಖಜಾಂಚಿಯಾಗಿ ವೃಷಭ ಕರೋಲೆ ಆಯ್ಕೆಯಾಗಿದ್ದಾರೆ. ಒಂದು ವರ್ಷ ಕಾಲ ಸಮಾಜ ಸೇವೆಯಲ್ಲಿ ನಿರಂತರವಾಗಿ ತೊಡಗಿದ್ದು ಖುಷಿ ನೀಡಿದೆ. ನಮ್ಮ ಅವಧಿಯಲ್ಲಿ ಪರಿಸರ, ಯುವ ಜನಾಂಗ, ವಿಪತ್ತು ಪರಿಹಾರ, ಬಾಲ್ಯ ಕ್ಯಾನ್ಸರ್​, ಸೇರಿ ಇತರ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿದ್ದೇವೆ. ನೂತನ ಪದಾಧಿಕಾರಿಗಳು ಸಹ ನಮ್ಮ ಯೋಜನೆ ಮುಂದುವರಿಸುವುದರ ಜತೆಗೆ ಇನ್ನೂ ಅನೇಕ ಹೊಸ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಿದ್ದಾರೆ ಎಂದರು.
ಕವಿತಾ ಅಂಗಡಿ, ವೃಷಭ ಕರೋಲೆ, ಶೈಲಾ ಕಡಗುದರಿ, ಉಷಾ ಗದ್ದಗಿಮಠ, ಇತರರು ಇದ್ದರು.