ಕಲಬುರಗಿ: ಡಿಜಿಟಲï ಕಾಲಘಟ್ಟದಲ್ಲೂ ಪತ್ರಿಕಾ ಕ್ಷೇತ್ರದ ವ್ಯವಹಾರ ೪೫ ಸಾವಿರ ಕೋಟಿ ರೂ.ಗೆ ಏರಿರುವುದು ಭಾರತದ ಪತ್ರಿಕಾ ರಂಗದ ಬೆಳವಣಿಗೆಯ ದ್ಯೋತಕ ಎಂದು ಆಕಾಶವಾಣಿ ನಿವೃತ್ತ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ.ಸದಾನಂದ ಪೆರ್ಲ ಹೇಳಿದರು.
ಗೋದುತಾಯಿ ದೊಡ್ಡಪ್ಪ ಅಪ್ಪ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಮಂಗಳವಾರ ಆಯೋಜಿಸಿದ್ದ ಪತ್ರಿಕಾ ದಿನ ಕಾರ್ಯಕ್ರಮ ಉದ್ಘಾಟಿಸಿದ ಅವರು, ಐದು ವರ್ಷ ಹಿಂದೆ ಭಾರತ ಪತ್ರಿಕಾ ರಂಗದ ವ್ಯವಹಾರ ೩೦ ಸಾವಿರ ಕೋಟಿ ರೂ. ಇತ್ತು. ಈಗದು ೪೫ ಸಾವಿರ ಕೋಟಿ ರೂ.ಗೆ ತಲುಪಿದೆ. ಆದಾಯದಲ್ಲಿ ಶೇ.೬೫ ಹೆಚ್ಚಳ ಜತೆಗೆ ಪತ್ರಿಕೆಗಳ ಪ್ರಸಾರವೂ ಶೇ.೧೫ ವೃದ್ಧಿಯಾಗಿದೆ. ಅಭಿವೃದ್ಧಿಪರ ಪತ್ರಕರ್ತ ಆತಂಕ, ಸವಾಲುಗಳ ನಡುವೆಯೂ ಸ್ಮಾರ್ಟ್ ಸ್ಮಾರ್ಟ್ ಆಗುವ ಕಾಲ ಪರಿಪಕ್ವವಾಗಿದೆ ಎಂದರು.
ಪತ್ರಿಕೆಗಳ ಮುದ್ರಣ ಮತ್ತು ಪ್ರಸಾರ ಕುಸಿತದ ಭಯದ ನಡುವೆ ಡಿಜಿಟಲï ಹಾವಳಿ ತಡೆಗೆ ಪರ್ಯಾಯ ವ್ಯವಸ್ಥೆಗಳೊಂದಿಗೆ ಸ್ಮಾರ್ಟ್ ಆಗಿ ಕೆಲಸ ನಿರ್ವಹಿಸಬೇಕಿದೆ. ಪತ್ರಿಕೋದ್ಯಮ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಪತ್ರಿಕೆ, ರೇಡಿಯೋ ಟಿವಿ, ಬಹುರಾಷ್ಟಿçÃಯ ಕಂಪನಿಗಳ ಸಾರ್ವಜನಿಕ ಸಂಪರ್ಕ ಹುz್ದÉ, ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಪತ್ರಿಕೋದ್ಯಮ ಮತ್ತು ಸಮೂಹ ಸಮೂಹನ ವಿಭಾಗಗಳಲ್ಲಿ ಉಪನ್ಯಾಸಕ ಮತ್ತು ಸಚಿವಾಲಯಗಳಲ್ಲಿ ಮಾಧ್ಯಮ ಸಲಹೆಗಾರರಾಗುವ ವಿಪುಲ ಅವಕಾಶಗಳು ಸೃಷ್ಟಿಯಾಗುತ್ತಿವೆ ಎಂದು ಹೇಳಿದರು.
ಪ್ರಾಂಶುಪಾಲ ಡಾ.ಪುಟ್ಟಮಣಿ ದೇವಿದಾಸ್ ಮಾತನಾಡಿ, ಪತ್ರಿಕೋದ್ಯಮ ವಿದ್ಯಾರ್ಥಿಗಳು ಪತ್ರಿಕೆ, ವಿದ್ಯುನ್ಮಾನ ಮಾಧ್ಯಮ, ಸಾಮಾಜಿಕ ಜಾಲತಾಣಗಳನ್ನು ಬಳಸಿ e್ಞÁನ ಸಂಪನ್ನರಾಗಬೇಕು ಎಂದು ಸಲಹೆ ನೀಡಿದರು.
ವಿಭಾಗದ ಮುಖ್ಯಸ್ಥ ಕೃಪಾಸಾಗರ ಗೊಬ್ಬುರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ಹರ್ಮನ್ ಮೋಗ್ಲಿಂಗ್‌ನಿAದ ಆರಂಭಗೊAಡು ೧೮೧ ವರ್ಷ ಸಂದ ಕನ್ನಡ ಪತ್ರಿಕಾ ರಂಗ ಇಂದು ಹೆಮ್ಮೆರವಾಗಿ ಬೆಳೆದಿದೆ ಎಂದರು.
ಸಂಗೀತ ವಿಭಾಗದ ಮುಖ್ಯಸ್ಥೆ ಸೀಮಾ ಪಾಟೀಲï, ವಾಣಿಜ್ಯ ವಿಭಾಗದ ಉಪನ್ಯಾಸಕ ಪ್ರಸಾದ ಅಷ್ಟಗಿ ಇತರರಿದ್ದರು. ಪತ್ರಿಕೋದ್ಯಮ ವಿದ್ಯಾರ್ಥಿನಿ ರಕ್ಷಿತಾ ದಾಮ ನಿರೂಪಣೆ ಮಾಡಿದರು.