ಬೈಲಹೊಂಗಲ ಪುರಸಭೆ ಸದಸ್ಯ ವಿಜಯ ಬೋಳಣ್ಣವರ ಅವರು ಪತ್ರಿಕಾ ವಿತರಕರಗೆ ಮಾಸ್ಕ್, ಸ್ಯಾನಿಟೈಸರ್ ವಿತರಿಸಿದರು. ಪುರಸಭೆ ಸದಸ್ಯ ಶಿವಾನಂದ ಕೋಲಕಾರ, ಬಸವರಾಜ ಕಲಾದಗಿ, ಕುಮಾರ ರೇಶ್ಮಿ, ಶರೀಫ್ ನದಾಫ್ ಇತರರಿದ್ದರು. 
ಜಿಲ್ಲೆ

ಪತ್ರಿಕಾ ವಿತರಕರ ಸೇವೆ ಅಮೋಘ

ಬೈಲಹೊಂಗಲ: ಕರೊನಾ ಸಂಕಷ್ಟ ಕಾಲದಲ್ಲೂ ಜನತೆಗೆ ಜಗತ್ತಿನ ಆಗುಹೋಗುಗಳ ತಿಳಿವಳಿಕೆ ನೀಡುವ ಹಾಗೂ ಪತ್ರಿಕಾ ಸೇವೆ ಒದಗಿಸುತ್ತಿರುವ ಪತ್ರಕರ್ತರ ಹಾಗೂ ಹಂಚಿಕೆದಾರರ ಸೇವೆ ಅಮೋಘ. ಸರ್ಕಾರ ಹಾಗೂ ಸಂಘ-ಸಂಸ್ಥೆಗಳು ಅವರ ನೆರವಿಗೆ ಧಾವಿಸಬೇಕು ಎಂದು ಪುರಸಭೆ ಸದಸ್ಯ ವಿಜಯ ಬೋಳಣ್ಣವರ ಹೇಳಿದರು.

ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಬುಧವಾರ ಪತ್ರಿಕಾ ವಿತರಿಕರಿಗೆ ಗ್ಲೌಸ್, ಮಾಸ್ಕ್, ಸ್ಯಾನಿಟೈಸರ್‌ಮತ್ತಿತರ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು. ಕರೊನಾ ಸೇನಾನಿಗಳಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯರು, ಪೊಲೀಸರು, ಆಶಾ, ಅಂಗನವಾಡಿ ಕಾರ್ಯಕರ್ತರಂತೆ ಪತ್ರಿಕಾ ವಿತರಕರ ಆರೋಗ್ಯದ ಬಗ್ಗೆಯೂ ಸರ್ಕಾರ ವಿಶೇಷ ಕಾಳಜಿ ವಹಿಸಬೇಕು. ಕರೊನಾ ಆತಂಕದ ಮಧ್ಯೆಯೂ ಶ್ರಮವಹಿಸಿ ದುಡಿಯುತ್ತಿರುವ ಪತ್ರಿಕಾ ವಿತರಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಅಲ್ಲದೆ, ಆದ್ಯತೆ ಮೇರೆಗೆ ಅವರಿಗೂ ಕರೊನಾ ಲಸಿಕೆ ನೀಡಬೇಕು. ಕರೊನಾ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ಸರ್ಕಾರದೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು. ಕರೊನಾ ನಿಯಂತ್ರಣ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದರು. ಪುರಸಭೆ ಸದಸ್ಯ ಶಿವಾನಂದ ಕೋಲಕಾರ, ಪತ್ರಕರ್ತರಾದ ಬಸವರಾಜ ಕಲಾದಗಿ, ಕುಮಾರ ರೇಶ್ಮಿ, ಶರೀಫ್ ನದಾಫ್, ರವಿಕಿರಣ ಯಾತಗೇರಿ, ಪ್ರಕಾಶ ಕಲಾದಗಿ, ರವಿ ಹೊಸಮನಿ, ಅಮಿತ ರೇಶ್ಮಿ, ಶಶಿಧರ ಆನಿಗೋಳ, ಅಶ್ವಿನ್ ಇಂಗಳಗಿ, ಶಿವನಾಗ ಶಿಂಗಣ್ಣವರ, ಪಿಂಟು ಕುದರಿ, ಆನಂದ ಭಜಂತ್ರಿ, ಶಿವಣ್ಣ ದೊಡಮನಿ ಇತರರು ಇದ್ದರು.