ಭಾಲ್ಕಿ: ಪತ್ರಿಕಾ ವಿತರಕರ ಕಾರ್ಯ ಕಠಿಣ ಮತ್ತು ಶ್ಲಾಘನೀಯ ಎಂದು ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಂಚಾಲಕ ಮಂಜುನಾಥ ಬೆಳಕೀರೆ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಸೋಮವಾರ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೋಮವಾರ ಆಯೋಜಿಸಿದ್ದ ಪತ್ರಿಕಾ ವಿತರಕರ ದಿನಾಚರಣೆಯಲ್ಲಿ ಮಾತನಾಡಿ, ಮಳೆ, ಛಳಿ, ಗಾಳಿ ಯಾವುದಕ್ಕೂ ಅಂಜದೆ ಸುದ್ದಿಗಳನ್ನು ಮನೆಗೆ ಮುಟ್ಟಿಸುತ್ತಿರುವ ವಿತರಕರ ಕಾರ್ಯ ಶ್ಲಾಘನೀಯ. ಓದುಗರು ವಿತರಕರಿಗೆ ಅಡೆ ತಡೆ ಮಾಡದೆ ತಿಂಗಳಿಗೆ ಸರಿಯಾಗಿ ಪತ್ರಿಕೆ ಬಿಲ್ ನೀಡಬೇಕು ಎಂದು ಸಲಹೆ ನೀಡಿದರು.
ಕಾರ್ಯನಿತರ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಯರಾಜ ದಾಬಶೆಟ್ಟಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಗಣಪತಿ ಬೋಚರೆ ಪ್ರಾಸ್ತಾವಿಕ ಮಾತನಾಡಿದರು. ಕೋಶಾಧ್ಯಕ್ಷ ಸಂತೋಷ ಬಿ.ಜಿ.ಪಾಟೀಲ್ ವಿತರಕರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿತರಕರಾದ ರಾಜಗುರು ಮಹಾಗಾವೆ, ದಿಲೀಪ ಚನ್ನಾಳೆ, ಮುರಳಿಧರ, ಶೇಖ್ ಪಟೇಲ್ ಅವರನ್ನು ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ಸಂತೋಷ ಹಡಪದ, ಭದ್ರೇಶ ಗುರಯ್ಯ ಸ್ವಾಮಿ, ದೀಪಕ ಥಮಕೆ, ಚಿತ್ರಕಲಾ ಶಿಕ್ಷಕ ಪರಮೆಶ್ವರ ಕಡ್ಯಾಳೆ ಇತರರಿದ್ದರು.