ಬೆಂಗಳೂರು: ಪತ್ರಕರ್ತರು ಹಾಗೂ ಪತ್ರಿಕಾ ಛಾಯಾಗ್ರಾಹಕರು ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ ಹೇಳಿದರು.
ಶನಿವಾರ ಪ್ರೆಸ್ ಕ್ಲಬ್‌ದಲ್ಲಿ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಅಂಗವಾಗಿಆಯೋಜಿಸಲಿದ್ದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 15 ವರ್ಷಗಳ ಕಾಲ ದಿನಪತ್ರಿಕೆಗಳಲ್ಲಿ ಪತ್ರಕರ್ತನಾಗಿ ಸೇವೆ ಮಾಡಿದ್ದು, ಛಾಯಾಗ್ರಾಹಕರ ಕಾರ್ಯವೂ ಅತ್ಯಂತ ಸವಾಲಿನ ಕೆಲಸವಾಗಿರುತ್ತದೆ. ಪ್ರತಿಯೊಬ್ಬ ಪತ್ರಿಕಾ ಛಾಯಾಗ್ರಾಹಕನೂ ನಿತ್ಯವೂ ಹೊಸ-ಹೊಸ ಸವಾಲುಗಳನ್ನು ಎದುರಿಸುಬೇಕಾಗುತ್ತದೆ. ಕೆಲವೊಮ್ಮೆ ಜೀವಕ್ಕೆ ಕುತ್ತು ಬರುವ ಸನ್ನಿವೇಶಗಳು ಇರುತ್ತವೆ ಎಂದು ಪ್ರಭಾಕರ ಹೇಳಿದರು. ಪತ್ರಿಕಾ ಛಾಯಾಗ್ರಾಹಕರ ಸಮಸ್ಯೆಗಳು ಏನಾದರೂ ಇದ್ದರೇ ನಮ್ಮ ಗಮನಕ್ಕೆ ತನ್ನಿರಿ. ನಮ್ಮಿಂದ ಸಾಧ್ಯವಾದಷ್ಟು ಸಹಾಯ ಸಹಕಾರ ನೀಡಲು ಶ್ರಮಿಸುವೆ ಎಂದು ಕೆ.ವಿ.ಪ್ರಭಾಕರ ಭರವಸೆ ನೀಡಿದರು. ಪ್ರೆಸ್‌ಕ್ಲಬ್ ಅಧ್ಯಕ್ಷ ಶ್ರೀಧರ ಆರ್.ಮಾತನಾಡಿ, ತಾವೂ ಎಂದಿಗೂ ತಮ್ಮ ಜತೆ ಇದ್ದೇವೆ. ವಿಡಿಯೋಗ್ರಾರ್, ಛಾಯಾಗ್ರಾಹಕರು, ಪುಟವಿನ್ಯಾಸಕರು, ವರದಿಗಾರರು, ಉಪಸಂಪಾದಕರು ಎಲ್ಲರ ಸಹೋದರರು ಇದ್ದಂತೆ. ಯಾರು ಕಿಳರೀಮೆಯಿಂದ ಇರಬಾರದು. ಪತ್ರಿಕೋದ್ಯಮದಲ್ಲಿ ಎಲ್ಲರಿಗೂ ತಮ್ಮದೇ ಆದ ಜವಾಬ್ದಾರಿಗಳಿವೆ. ಎಲ್ಲರೂ ಕೈಜೋಡಿಸಿದಾಗಲೇ ಮಾಧ್ಯಮ ಪರಿಪೂರ್ಣವಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಛಾಯಾಗ್ರಾಹಕರಾದ ವಿಶ್ವನಾಥ ಸುವರ್ಣ, ಎಂ.ಡಿ.ಅಸದ್, ಮುತ್ತು ಪಿ.ಹಾಗೂ ಭಾನುಪ್ರಕಾಶ ಚಂದ್ರ ಅವರನ್ನ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಜರ್ನಲಿಸ್ಟ್ ಅಸೋಸಿಯೇಷನ್ ಬೆಂಗಳೂರು ಸಂಸ್ಥೆಯ ಬೆಳ್ಳಿ ಮಹೋತ್ಸವದ ಲಾಂಛನವನ್ನು ಬಿಡುಗಡೆ ಮಾಡಲಾಯಿತು. ಅಧ್ಯಕ್ಷ ಮೋಹನಕುಮಾರ್ ಸಂಸ್ಥೆಯು ಸಾಗಿ ಬಂದಿರುವ ಹಾದಿಯನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಬಿ.ಪಿ.ಮಲ್ಲಪ್ಪ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.