ಕಲಬುರಗಿ: ಪತ್ರಿಕಾ ಉದ್ಯೋಗಿಯಾಗಿದ್ದ ನಗರದ ಮೆಥೋಡಿಸ್ಟ್ ಚರ್ಚ್ ಬಳಿಯ ಗುಲ್ಲಾಬಾವಡಿ ಪ್ರದೇಶದ ನಿವಾಸಿಯಾಗಿದ್ದ ಆನಂದ ರಾಜಪ್ಪ (೬೭) ಶನಿವಾರ ನಿಧನರಾದರು. ಕಳೆದ ಮೂರುವರೆ ದಶಕಗಳಿಂದ ವಿವಿಧ ಪತ್ರಿಕೆಗಳ ಮುದ್ರಣ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.ಸಹೋದರಿ ಹಾಗೂ ಬಂಧುಗಳನ್ನು ಅಗಲಿದ್ದಾರೆ.ಭಾನುವಾರ ಮಧ್ಯಾಹ್ನ ೧-೩೦ ಗಂಟೆಗೆ ವೆಂಕಟೇಶ ನಗರದಲ್ಲಿರುವ ಕ್ರಿಯಶ್ಚಿನ್ ಗ್ರೇ ಯಾರ್ಡ್ದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು. ಆನಂದ ರಾಜಪ್ಪ ನಿಧನಕ್ಕೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಪತ್ರಿಕಾ ಸಂಸ್ಥೆಯ ಸಿಬ್ಬಂದಿ ಶೋಕ ವ್ಯಕ್ತಪಡಿಸಿದ್ದಾರೆ.
====