???????????????????????????????????? 
ಜಿಲ್ಲೆ

ಪತ್ರಕರ್ತರು ಜನರ ಹಿತಾಸಕ್ತಿ ಕಾಪಾಡಿ

ಶಹಾಪುರ: ಮನುಷ್ಯರನ್ನು ಮನುಷ್ಯರನ್ನಾಗಿ ಕಾಣದಂತಹ ಮನಃಸ್ಥಿತಿ ಎಲ್ಲೆಡೆ ಬೆಳೆಯುತ್ತಿದ್ದು, ಬದಲಾದ ಸಾಮಾಜಿಕ ಸನ್ನಿವೇಶದಲ್ಲಿ ಪತ್ರಕರ್ತರ ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದೆ ಎಂದು ವಿಮರ್ಶಕ ಸಿ. ಎಸ್. ಭೀಮರಾಯ ಹೇಳಿದರು.

ನಗರದ ಸಂಧ್ಯಾ ಸಾಹಿತ್ಯ ವೇದಿಕೆ ಮತ್ತು ಟರ್ನಿಂಗ್ ಪಾಯಿಂಟ್ ಕಂಪ್ಯೂಟರ್ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡ ಪತ್ರಕರ್ತ, ಲೇಖಕ ರವಿ ಹಿರೇಮಠ ಅವರ ಸ್ಪಂದನ ಕೃತಿ ಲೋಕಾರ್ಪಣೆಯಲ್ಲಿ ಮಾತನಾಡಿದ ಅವರು, ಧರ್ಮ, ಜಾತಿ, ಮತ ಮತ್ತು ಪಂಥಗಳ ಆಧಾರದಲ್ಲಿ ಸಮಾಜವನ್ನು ಒಡೆಯುವ ಹಾಗೂ ಮನುಷ್ಯ-ಮನುಷ್ಯರಲ್ಲಿ ಬೇಧ ಕಲ್ಪಿಸುವ ಘಟನೆ ನಡೆಯುತ್ತಿರುವುದು ವಿಷಾದನೀಯ ಎಂದರು.

ಸ್ಪAದನ ಸಂಕಲನದಲ್ಲಿ ಮೂವತ್ತೆಂಟು ಲೇಖನಗಳಿವೆ. ವ್ಯಕ್ತಿ ಚಿತ್ರಗಳು, ಐತಿಹಾಸಿಕ ಸ್ಮಾರಕಗಳು ಮತ್ತು ಹೈದರಾಬಾದ್ ಕರ್ನಾಟಕದ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಕ್ಷೇತ್ರಗಳ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲುವ ಈ ಕೃತಿಯಲ್ಲಿನ ಎಲ್ಲ ಲೇಖನಗಳು ವಸ್ತುನಿಷ್ಠವಾಗಿವೆ ಎಂದು ಹೇಳಿದರು.

ಕೃತಿ ಲೋಕಾರ್ಪಣೆ ಮಾಡಿದ ಹಿರಿಯ ಪತ್ರಕರ್ತ ಡಾ.ಶಿವರಾಮ ಹಸುಂಡಿ, ಪ್ರಸ್ತುತ ವರ್ತಮಾನಕ್ಕೆ ಸ್ಪಂದನ ಕೃತಿ ಮೌಲಿಕ ಬರಹಗಳು, ವಿಚಾರಗಳ ಮೂಲಕ ಮುಖಾಮುಖಿಯಾಗುತ್ತದೆ. ಶಹಾಪುರ ತಾಲೂಕಿನ ಪರಿಸರದ ವ್ಯವಸ್ಥೆ ಮತ್ತು ಅವ್ಯವಸ್ಥೆ ಕುರಿತು ಕನ್ನಡಿ ಹಿಡಿಯುತ್ತದೆ ಎಂದರು.

ಹಿರಿಯ ಪತ್ರಕರ್ತ ಹಾಗೂ ಲೇಖಕ ಮಂಡಲಗಿರಿ ಪ್ರಸನ್ನ ಮಾತನಾಡಿ, ಸ್ಪಂದನ ಕೃತಿಯಲ್ಲಿ ಸಮಾಜಮುಖಿ ಚಿಂತೆನೆಗಳು, ಜೀವನ ಮೌಲ್ಯ ಬರಹಗಳು ಅನಾವರಣಗೊಂಡಿವೆ ಎಂದು ಹೇಳಿದರು. ಸ್ಪಂದನ ಕೃತಿಯ ಲೇಖಕ ರವಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಂಚಾಕ್ಷರಯ್ಯ ಹಿರೇಮಠ ನಿರ್ವಹಿಸಿದರು, ಶಾರದಾ ಸಿ.ಗೋಗಿ ಪ್ರಾರ್ಥಿಸಿದರು, ರುದ್ರಮುನಿ ಹಿರೇಮಠ ವಂದಿಸಿದರು.

ಈ ವೇಳೆ ಹಿರಿಯ ಪತ್ರಕರ್ತ ನಾರಾಯಣಾಚಾರ್ಯ ಸಗರ, ಟಿ.ನಾಗೇಂದ್ರ, ಡಾ.ಗೋವಿಂದರಾಜ ಆಲ್ದಾಳ, ಪಂಚಾಕ್ಷರಯ್ಯ ಹಿರೇಮಠ, ಕೆ.ಕೆ.ಜಾಗಿರದಾರ, ವೀರಭದ್ರಯ್ಯ, ಶಿವಪ್ರಸಾದ ಕರದಳ್ಳಿ, ಬಸವರಾಜ ಅರುಣಿ, ಮಲ್ಲಣ್ಣ ದೇಸಾಯಿ, ನಾಗು ಹೂಗಾರ, ಪ್ರಮೋದ ಕುಲ್ಕರ್ಣಿ, ದೇವಿದಾಸ ಬಾಸುತ್ಕರ, ರುದ್ರಗೌಡ, ರಂಗಣ್ಣ, ಜೆ.ಸುನೀತಾ ಹಿರೇಮಠ, ಬಸವರಾಜ ಸಿನ್ನೂರ, ಸಾಹೇಬಗೌಡ ಪಾಟೀಲ್, ರವಿ ಪತ್ತಾರ, ಹಣಮಂತ ಚನ್ನೂರ, ಭೀಮಾಶಂಕರ ಇತರರಿದ್ದರು.