ಗೋಣಿಕೊಪ್ಪ; ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನಮ್ಮ ದೇಶ, ನಮ್ಮ ಸಂಸ್ಕೃತಿ ಕಾರ್ಯಕ್ರಮದ ಭಾಗಿವಾಗಿ ಗೋಣಿಕೊಪ್ಪದ ಆಂಟೋ ಅವರ ನಿವಾಸದಲ್ಲಿ ಭಾನುವಾರ ಈಸ್ಟರ್ ಕಾರ್ಯಕ್ರಮ ಯೋಜಿಸಲಾಗಿತ್ತು.
ಮುಖಂಡರಾ ಸಿ.ಜೆ.ಆಂಟೋ ಮಾತನಾಡಿ, ಯೇಸುವನ್ನು ಶಿಲುಬೆಗೇರಿಸುವ ಸಂದರ್ಭದಲ್ಲಿ 3 ದಿನಗಳಲ್ಲಿ ಪುನರುತ್ಥಾನಗೊಳ್ಳುವ ವಿಶ್ವಾಸ ಹೊಂದಿತ್ತು. ಇದರಂತೆ ಇದೇ ದಿನವನ್ನು ನಾವು ಹಬ್ಬವಾಗಿ ಆಚರಣೆ ಮಾಡುತ್ತೇವೆ. 50 ದಿನಗಳ ಉಪವಾಸದಲ್ಲಿ ನಾವು ನಮಗೆ ಅತ್ಯಂತ ಪ್ರಿಯವಾದ ಯಾವುದಾದರೂ ಒಂದು ಆಹಾರವನ್ನು ತ್ಯಜಿಸಿ ಪೂಜಿಸುತ್ತೇವೆ. ಈಸ್ಟರ್ ದಿನ ಸಾಂಪ್ರದಾಯಿಕವಾಗಿ ಅಕ್ಕಿ, ಸಕ್ಕರೆಯಿಂದ ತಯಾರಿಸಿದ ತಿಂಡಿಯನ್ನು ತಿಂದು ಉಪವಾಸದಿಂದ ಹೊರಬರುತ್ತೇವೆ ಎಂದರು.
ಮುಖಂಡ ಲಿನಿಜಾನ್ ಮಾತನಾಡಿ, ಇದಕ್ಕೂ 7 ದಿನದ ಹಿಂದಿನ ಭಾನುವಾರವನ್ನು ನಾವು ಪಾಲ್ಮ್ ಸಂಡೆ ಎಂದು ಆಚರಿಸುತ್ತೇವೆ. ಆ ದಿನ ಯೇಸು ಕತ್ತೆಯ ಮೇಲೆ ಪಾಲ್ಮ್ ಮರದ ಗರಿಯನ್ನು ಹಿಡಿದುಕೊಂಡು ಬಂದಿದ್ದ ಎಂಬ ಆಚರಣೆಯನ್ನು ನಾವು ಹಬ್ಬದಲ್ಲಿ ಆಚರಿಸಿ ಪೂಜಿಸುತ್ತೇವೆ. ನಮ್ಮ ಹಬ್ಬದಲ್ಲಿ ಯೇಸುವಿನ ಜೀವಿತಾವಧಿಯ ಆಗು-ಹೋಗುಗಳಿಗೆ ಹೆಚ್ಚಿನ ಮಹತ್ವ ನೀಡುತ್ತೇವೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಕಾರ್ಯಕ್ರಮ ಸಂಚಾಲಕ ಸಿಂಗಿ ಸತೀಶ್, ಪ್ರ. ಕಾರ್ಯದರ್ಶಿ ಎನ್.ಎನ್.ದಿನೇಶ್, ಕಾರ್ಯದರ್ಶಿ ಮಂಡೇಡ ಅಶೋಕ್, ಖಜಾಂಚಿ ವಿ.ವಿ.ಅರುಣ್‌ಕುಮಾರ್, ನಿರ್ದೇಶಕ ದರ್ಶನ್ ದೇವಯ್ಯ, ಎಂ.ಎಂ.ಚನ್ನನಾಯಕ ಇದ್ದರು.