ಹೊಳೆನರಸೀಪುರ ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಕಚೇರಿಯ ತಾತ್ಕಾಲಿಕ ಕಟ್ಟಡದ ಉದ್ಘಾಟನೆ ಕಾರ್ಯಕ್ರಮ ನಡೆಯಿತು. 
ಜಿಲ್ಲೆ

ಪತ್ರಕರ್ತರ ಸಂಘಕ್ಕೆ ಪುರಸಭೆ ಕಟ್ಟಡ ಹಸ್ತಾಂತರ

ಹೊಳೆನರಸೀಪುರ: ನಿರುಪಯುಕ್ತ ಪುರಸಭೆ ಕಟ್ಟಡವನ್ನು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಗೆ ತಾತ್ಕಾಲಿಕವಾಗಿ ನೀಡಲಾಗಿದೆ ಎಂದು ಪುರಸಭೆ ಅಧ್ಯಕ್ಷ ಎಚ್.ಕೆ.ಪ್ರಸನ್ನ ತಿಳಿಸಿದರು.

ಶುಕ್ರವಾರ ಪಟ್ಟಣದ ಹಾಸನ ಮೈಸೂರು ರಸ್ತೆಯ ಫ್ಲೈ ಓವರ್ ಬಳಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಕಚೇರಿಯ ತಾತ್ಕಾಲಿಕ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಬಹುದಿನಗಳ ಬೇಡಿಕೆಯನ್ನು ಈಡೇರಿಸುವ ಆಶಯದಿಂದ ಶಾಸಕರು ಫ್ಲೈ ಓವರ್ ಪಕ್ಕದ ನಿರುಪಯುಕ್ತ ಕಟ್ಟಡವನ್ನು ತಾತ್ಕಾಲಿಕವಾಗಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಗೆ ನಿಯೋಜಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸಂಘಕ್ಕೆ ಶಾಶ್ವತ ನಿವೇಶನ, ಕಟ್ಟಡವನ್ನು ನಿರ್ಮಿಸಲು ಪುರಸಭೆ ವತಿಯಿಂದ ಸಹಕರಿಸುವುದಾಗಿ ತಿಳಿಸಿದರು.

ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಚ್. ವೇಣುಕುಮಾರ್, ಪತ್ರಕರ್ತರಾದ ಹೆತ್ತೂರು ನಾಗರಾಜ್, ಬಿ.ಆರ್.ಬೊಮ್ಮೇಗೌಡ, ಕೆ.ಜಿ.ಸುರೇಶ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಬಿ.ವೆಂಕಟೇಶ್, ವಿತರಕರ ಸಂಘದ ಮೋಹನ್, ಸುರೇಶ್, ಜಗದೀಶ್, ಇನ್ನಿತರರು ಇದ್ದರು.