ಜಿಲ್ಲೆ

ಪತ್ರಕರ್ತ ಅಹೋಬಳಪತಿಗೆ ಸನ್ಮಾನ

ಚಿತ್ರದುರ್ಗ: ಕರ್ನಾಟಕ ಮಾಧ್ಯಮ ಅಕಾಡೆಮಿ ನೂತನ ಸದಸ್ಯ, ಪತ್ರಕರ್ತ ಎಂ.ಎನ್.ಅಹೋಬಳಪತಿ ಅವರಿಗೆ ಪತ್ರಿಕಾ ಭವನದಲ್ಲಿ ಗುರುವಾರ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸನ್ಮಾನಿಸಲಾಯಿತು.

ನಿವೃತ್ತ ಪ್ರಾಧ್ಯಾಪಕ ಡಾ.ನಟರಾಜ್ ಮಾತನಾಡಿ, ಸರ್ಕಾರ ಗುರುತಿಸಿ ಅಕಾಡೆಮಿ ಸದಸ್ಯರಾಗಿ ನೇಮಕ ಮಾಡಿರುವುದು ಸಂತಸದ ವಿಚಾರ. ಸ್ಥಳೀಯ ಪತ್ರಿಕೆಯಿಂದ ವೃತ್ತಿ ಆರಂಭಿಸಿ, ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿರುವುದು ಕಡಿಮೆ ಸಾಧನೆಯಲ್ಲ ಎಂದರು.

ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಕೆಲವು ಮಹತ್ವದ ಬದಲಾವಣೆಗೆ ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ಅಹೋಬಳಪತಿ ಅವರು ಸರ್ಕಾರದ ಗಮನ ಸೆಳೆಯಬೇಕು ಎಂದು ಒತ್ತಾಯಿಸಿದರು.

ಪತ್ರಕರ್ತ ಅಹೋಬಳಪತಿ ಮಾತನಾಡಿ, ಇದನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ರಾಜ್ಯ ಸರ್ಕಾರ ಗುರುತಿಸಿ ಆಯ್ಕೆ ಮಾಡಿರುವುದು ಸಂತೋಷದ ಸಂಗತಿ ಎಂದರು.

ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ, ಪತ್ರಕರ್ತರಾದ ಚಿಕ್ಕಪ್ಪನಹಳ್ಳಿ ಷಣ್ಮುಖ, ಶ.ಮಂಜುನಾಥ್, ಹರಿಯಬ್ಬೆ ಹೆಂಜಾರಪ್ಪ, ರವಿ ಮಲ್ಲಾಪುರ, ರವಿ ಉಗ್ರಾಣ, ಗೌನಹಳ್ಳಿ ಗೋವಿಂದಪ್ಪ, ನಾಕೀಕೆರೆ ತಿಪ್ಪೇಸ್ವಾಮಿ, ರಾಜು, ವಿನಯ್ ತೊಡರನಾಳ್, ಚಳ್ಳಕೆರೆ ವೀರೇಶ್, ದರ್ಶನ್, ನಾಗೇಶ್, ಪ್ರಹ್ಲಾದ್ ಇತರರಿದ್ದರು.