ಜಿಲ್ಲೆ

ಪತ್ನಿ ಹತೈಗೈದಿದ್ದ ಪತಿಗೆ ಕಠಿಣ ಜೀವಾವಧಿ ಸಜೆ

ಚಿತ್ರದುರ್ಗ: ಪತ್ನಿ ಶೀಲ ಶಂಕಿಸಿ ಆಕೆಯನ್ನು ಹತ್ಯೆಗೈದಿದ್ದ ಅಪರಾಧಿಗೆ ನ್ಯಾಯಾಲಯ ಸೋಮವಾರ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿ ದೆ. ಮೊಳಕಾಲ್ಮೂರು ತಾಲೂಕು ಚಿಕ್ಕೇರನಹಳ್ಳಿ ನಿವಾಸಿ ಹನುಮಂತಪ್ಪ ಶಿಕ್ಷೆಗೆ ಒಳಗಾದ ಅಪರಾಧಿ. ಶೀಲ ಶಂಕಿಸಿ ಪದೆ ಪದೇ ತನ್ನ ಪತ್ನಿ ಸಾ ವಿತ್ರಮ್ಮಳೊಂದಿಗೆ ಜಗಳವಾಡುತ್ತಿದ್ದ ಹನುಮಂತಪ್ಪ,2023 ಜುಲೈ 19ರಂದು ಬೆಳಗ್ಗೆ ಹಸು ಮೇಯಿಸಿಕೊಂಡು ಬರಲು ಜಮೀನೊಂದಕ್ಕೆ ಹೋಗಿದ್ದ ಪತ್ನಿಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಆಕೆಯನ್ನು ಕೊಲೆ ಮಾಡಿದ್ದ.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಮೊಳಕಾಲ್ಮೂರು ಠಾಣೆ ಸಿಪಿಐ ವಸಂತ್ ವಿಠಲ್‌ಅಸೋಡೆ ಕೋರ್ಟಿಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಚಿತ್ರದುರ್ಗ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಶಂಕರಪ್ಪ ನಿಂಬ ಣ್ಣ ಕಲ್ಕನಿ ಅವರು ಅಪರಾಧಿಗೆ ಕಠಿಣ ಜೀವಾವಧಿ ಶಿಕ್ಷೆ,50 ಸಾವಿರ ರೂ.ದಂಡ ಹಾಗೂ ದಂಡ ಕಟ್ಟಲು ತಪ್ಪಿದಲ್ಲಿ ಒಂದು ವರ್ಷ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಅಪರ ಸರ್ಕಾರಿ ಅಭಿಯೋಜಕ ಎನ್.ಎಸ್.ಮಲ್ಲಯ್ಯ ವಾದಿಸಿದ್ದರು.

----