ರಜನಿ ಭರತ ಶಿಂಧೆ ದಂಪತಿ. 
ಜಿಲ್ಲೆ

ಪತ್ನಿ ನಿಧನದ ಸುದ್ದಿ ಕೇಳಿ ಪತಿ ಸಾವು

ಬೆಳಗಾವಿ: ಪತ್ನಿಯ ನಿಧನದ ಸುದ್ದಿ ತಿಳಿದ ಪತಿಯೂ ಹೃದಯಾಘಾತದಿಂದ ಮೃತಪಟ್ಟ ಘಟನೆ ಬೆಳಗಾವಿ ಕ್ಯಾಂಪ್ ಪ್ರದೇಶದಲ್ಲಿ ಗುರುವಾರ ಸಂಭವಿಸಿದೆ. ಕ್ಯಾಂಪ್ ಪ್ರದೇಶದ ಕೊಂಡಪ್ಪ ಸ್ಟ್ರೀಟ್ ನಿವಾಸಿ ರಜನಿ ಭರತ ಶಿಂಧೆ(48) ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ಆಸ್ಪತ್ರೆಯಲ್ಲಿ ನಿಧನರಾದರು. ಪತ್ನಿಯ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಪತಿ ಭರತ ಶಿಂಧೆ(55) ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದು ಮೃತಪಟ್ಟರು. ಪತ್ನಿ, ಪತಿ ಒಂದೇ ದಿನ ಅಲ್ಪಕಾಲದ ಅಂತರದಲ್ಲಿ ಮೃತಪಟ್ಟಿದ್ದು, ಕುಟುಂಬವನ್ನು ದು:ಖದಲ್ಲಿ ಮುಳುಗಿಸಿದೆ. ಮೃತರಿಗೆ ಪುತ್ರ ಹಾಗೂ ಪುತ್ರಿ ಇದ್ದಾರೆ.