ಜಿಲ್ಲೆ

ಪತ್ನಿ ಕೊಂದು, ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪತಿ

ಹಳೆಬೀಡು: ಇಲ್ಲಿಗೆ ಸಮೀಪದ ಪೊನ್ನಾಥಪುರ ಗ್ರಾಮದಲ್ಲಿಪತಿಯೇ ಪತ್ನಿಯನ್ನು ಕೊಂದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಪುಷ್ಪಲತಾ(೪೫) ಹಾಗೂ ಓಂಕಾರಪ್ಪ(೫೦) ಮೃತ ದಂಪತಿಯಾಗಿದ್ದು, ಗ್ರಾಮದ ಸ್ವಂತ ತೋಟದಲ್ಲಿ ಸಾವಿಗೀಡಾಗಿದ್ದಾರೆ. ಜ. ೨೩ ರಂದೆ ಘಟನೆ ನಡೆದಿದ್ದು ಶನಿವಾರ ಮಧ್ಯಾಹ್ನ ಪ್ರಕರಣ ಬೆಳಕಿಗೆ ಬಂದಿದೆ.

ತೋಟದ ಕೆಲಸದಲ್ಲಿ ನಿರತನಾಗಿದ್ದ ಓಂಕಾರಪ್ಪ, ಕ್ಷುಲ್ಲಕ ಕಾರಣಕ್ಕಾಗಿ ಆಯುಧದಿಂದ ಪತ್ನಿಯ ತಲೆಗೆ ಹೊಡೆದಿದ್ದು, ಪರಿಣಾಮ ಪತ್ನಿ ಪುಷ್ಪಲತಾ ರಕ್ತಸ್ರಾವದಿಂದ ಸ್ಥಳದಲ್ಲೆ ಸಾವಿಗೀಡಾಗಿದ್ದಾಳೆ. ಇದರಿಂದ ಭಯಗೊಂಡ ಪತಿಯು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ಹಳೆಬೀಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶವಪರೀಕ್ಷೆ ನಡೆಸಲಾಗಿದೆ.