ಜಿಲ್ಲೆ

ಪತ್ನಿ ಕೊಂದವನಿಗೆ ಜೀವಾವಧಿ ಸಜೆ

ಮಧುಗಿರಿ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಯಾದವ ಕರಕೇರ ಆದೇಶ

ಕೊರಟಗೆರೆ: ಪತ್ನಿಯನ್ನು ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತಾಲೂಕಿನ ಸಿ.ಎನ್​.ದುರ್ಗಾ ಹೋಬಳಿ ಥರಟಿ ಗ್ರಾಮದ ದೇವರಾಜು ಎಂಬಾತನಿಗೆ ಮಧುಗಿರಿ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಏನಿದು ಪ್ರಕರಣ: ತಾಲೂಕಿನ ಸಿ.ಎನ್​. ದುರ್ಗಾ ಹೋಬಳಿ ಥರಟಿ ಗ್ರಾಮದ ಯಶೋದಾ ಮತ್ತು ಆಕೆಯ ಪತಿ ದೇವರಾಜು ನಡುವೆ ಆಗಾಗ್ಗೆ ಜಗಳ ನಡೆಯಿತ್ತಿತ್ತು. ಯಶೋದಾ ಮೇಲೆ ಅನುಮಾನಪಡುತ್ತಿದ್ದ ಪತಿ ದೇವರಾಜು 2021 ಮಾರ್ಚ್​ 10 ರಂದು ಅಡುಗೆ ಮಾಡುತ್ತಿದ್ದಾಗ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದ. ಟನೆ ಸಂಬಂಧ ಕೊರಟಗೆರೆ ಪೊಲೀಸ್​ ಠಾಣೆ ಸಿಪಿಐ ಸಿದ್ದರಾಮೇಶ್ವರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಮಧುಗಿರಿ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಲಯದ ನ್ಯಾಯಾಧೀಶ ಯಾದವ ಕರಕೇರ ಆರೋಪಿ ದೇವರಾಜುವಿಗೆ ಜೀವಾವಧಿ ಶಿಕ್ಷೆ ಮತ್ತು 1 ಲಕ್ಷ ರೂ.ದಂಡ ವಿಧಿಸಿ ತೀರ್ಪು ನೀಡಿದ್ದು,

ದಂಡದ ಪೂರ ಹಣವನ್ನು ಮೃತಳ ಮಕ್ಕಳಾದ ಅಕ್ಷತಾ ಮತ್ತು ಲಿಖಿತ್​ ಅವರಿಗೆ ಪರಿಹಾರವಾಗಿ ನೀಡಲು ಆದೇಶಿಸಿದ್ದಾರೆ. ಪ್ರಕರಣದಲ್ಲಿ ಅಭಿಯೋಜನೆ ಪರವಾಗಿ ಸರ್ಕಾರಿ ಅಭಿಯೋಜಕ ಬಿ.ಎಂ.ನಿರಂಜನಮೂರ್ತಿ ವಾದ ಮಂಡಿಸಿದ್ದರು.

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದವನಿಗೆ 20 ವರ್ಷ ಜೈಲು

ತುಮಕೂರು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಪೋಕ್ಸೋ ಪ್ರಕರಣದ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ಮತ್ತು 1.50 ಲಕ್ಷ ರೂ. ದಂಡ ವಿಧಿಸಿ ತುಮಕೂರು ಎಫ್​ಟಿಎಸ್​ಸಿ -1ನೇ ನ್ಯಾಯಾಲಯದ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. 2020 ಏ.3ರಂದು ನೊಂದ ಬಾಲಕಿಯ ತಾಯಿ, ಕೋಡಿಹಳ್ಳಿಯರು(29) ವಿರುದ್ಧ ದೂರು ನೀಡಿ ಪ್ರಕರಣ ದಾಖಲಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿ ಎಂದು ಘೋಷಿಸಿದ ನ್ಯಾಯಾಲಯ ಶಿೆ ಪ್ರಮಾಣ ಪ್ರಕಟಿಸಿದೆ. ಮಹಿಳಾ ಠಾಣೆ ಪೊಲೀಸ್​ ಇನ್​ಸ್ಪೆಕ್ಟರ್​ ನವೀನ್​ಕುಮಾರ್​ ಚಾರ್ಜ್​ಶೀಟ್​ ಸಲ್ಲಿಸಿದ್ದರು. ವಿಶೇಷ ಸರ್ಕಾರಿ ಅಭಿಯೋಜಕಿ ಕೆ.ಎಸ್​.ಆಶಾ ವಾದ ಮಂಡಿಸಿದ್ದರು.