ಗದಗ: ಹಲವಾರು ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಾಬರ್ವುನ್ ತಳಿಯ ಪೊಲೀಸ್ ಶ್ವಾನ ರ್ಯಾಂಬೋ ಶ್ವಾನ ಭಾನುವಾರ ಹೃದಯಾಘಾತದಿಂದ ಮೃತಪಟ್ಟಿತು.
ನಗರದ ಹೆಲ್ತ್ಕ್ಯಾಂಪ್ನ ಪೊಲೀಸ್ ಮೈದಾನದಲ್ಲಿ ನೂತನ ಜಿಲ್ಲಾ ವರಿಷ್ಠಾಧಿಕಾರಿ ಯತೀಶ ಡಿಎಸ್ಪಿ ಪ್ರಲ್ಹಾದ ಸೇರಿ ವಿವಿಧ ಅಧಿಕಾರಿಗಳು ರ್ಯಾಂಬೋಗೆ ಪುಷ್ಪನಮನ ಸಲ್ಲಿಸಿದರು. ಕೆಲ ಸಮಯ ಮೌನಾಚರಣೆ ನಂತರ ಗಾಳಿಯಲ್ಲಿ ಮೂರು ಸುತ್ತಿನ ಗುಂಡು ಹಾರಿಸಿ ಸಕಲ ಸರ್ಕಾರಿ ಗೌರವದೊಂದಿಗೆ ರ್ಯಾಂಬೋ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
11 ವರ್ಷ 6 ತಿಂಗಳಿನ ರ್ಯಾಂಬೋ ಬೆಂಗಳೂರಿನ ಆಡುಗೋಡಿಯಲ್ಲಿ 9 ತಿಂಗಳ ತರಬೇತಿ ಪಡೆದು ಗದಗ ಜಿಲ್ಲಾ ಪೊಲೀಸ್ ಇಲಾಖೆ ಸೇರ್ಪಡೆಗೊಂಡಿತ್ತು. 2009ರಿಂದ 2020ರವರೆಗೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿತ್ತು. ಎಸ್.ವೈ. ಗಾಣಿಗೇರ ಅವರು ಶ್ವಾನದ ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದರು.
11 ವರ್ಷಗಳ ಅವಧಿಯಲ್ಲಿ ನರಸಾಪುರ ಕಳ್ಳತನ, ಶಿರಹಟ್ಟಿ ಕೊಲೆ ಪ್ರಕರಣ, ಶಿಗ್ಲಿ ಕಳ್ಳತನ, ಗಂಗಿಮಡಿ ಕಳ್ಳತನ, ಗದಗ ವಿವೇಕಾನಂದ ನಗರ ಕಳ್ಳತನ, ಮುಳುಗುಂದ, ಬೆಟಗೇರಿ ಕೊಲೆ ಪ್ರಕರಣ, ಗಜೇಂದ್ರಗಡ ಕಳ್ಳತನ ಸೇರಿ 190 ವಿವಿಧ ಪ್ರಕರಣಗಳಲ್ಲಿ ರ್ಯಾಂಬೋ ಕಾರ್ಯನಿರ್ವಹಿಸಿದೆ. ಕೊಲೆ, ದರೋಡೆ, ಕಳ್ಳತನದ 12 ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
--------------
ಚಿಂತಕರ ಸಂದೇಶ ಅಳವಡಿಸಿಕೊಳ್ಳಿ
*ಅನುಭಾವ ಚಿಂತನ ಪ್ರವಚನದಲ್ಲಿ ಡಾ.ಅನ್ನದಾನೀಶ್ವರ ಸ್ವಾಮೀಜಿ ಆಶೀರ್ವಚನ
ವಿಜಯವಾಣಿ ಸುದ್ದಿಜಾಲ ಮುಂಡರಗಿ
ಮಠಮಾನ್ಯಗಳು ಸಮಾಜಮುಖಿ ಕಾರ್ಯ ಮಾಡುತ್ತವೆ. ಜಾತ್ರಾ ಮಹೋತ್ಸವದಲ್ಲಿ ಭಕ್ತಾಧಿಗಳು ಪಾಲ್ಗೊಂಡು ಪೂಜ್ಯರು ಹೇಳುವಂತ ಪ್ರವಚನ ಸಂದೇಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಮಠದ ಜಾತ್ರಾ ಮಹೋತ್ಸವ ನಿಮಿತ್ತ ಆಯೋಜಿಸಿರುವ ಅನುಭಾವ ಚಿಂತನ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಎಲ್ಲರೂ ಸಾಧನಶೀಲರಾಗಬೇಕು. ಶಿವಯೋಗ ಎಂಬುವುದು ದೊಡ್ಡ ಸಾಧನೆ. ಆ ಸಾಧನೆ ಮಾಡಿಕೊಂಡರೆ ಬದುಕಿನಲ್ಲಿ ಮೋಕ್ಷ ದೊರೆಯುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಡಿಜಿಪಿ ಶಂಕರ ಬಿದರಿ ಮಾತನಾಡಿ, ಅನ್ನದಾನೀಶ್ವರ ಶ್ರೀಗಳು ಸಾತ್ವಿಕ ಶಕ್ತಿಯಾಗಿ ಸಮಾಜ್ಕಕೆ ಉತ್ತಮ ಸಂಸ್ಕಾರ ನೀಡುತ್ತಿದ್ದಾರೆ. ಶ್ರೀಮಠವು ದಾಸೋಹ, ಜ್ಞಾನದಿಂದ ಹೆಸರುವಾಸಿಯಾಗಿದೆ. ಶ್ರೀಮಠದೊಂದಿಗೆ ನಾವು ಸದಾ ಇರುತ್ತವೆ. ನಮ್ಮ ಮೇಲೆ ಶ್ರೀಗಳ ಆಶೀರ್ವಾದ ಇರಬೇಕು ಎಂದರು.
ಹೂವಿನಹಡಗಲಿ ಡಾ. ಹಿರಿಯ ಶಾಂತವೀರ ಸ್ವಾಮೀಜಿ ಮಾತನಾಡಿ, ಜಗದ್ಗುರು ಅನ್ನದಾನೀಶ್ವರ ಶ್ರೀಗಳು ಶೈಕ್ಷಣಿಕ, ಸಾಹಿತ್ಯ, ಧಾರ್ವಿುಕ ಮೊದಲಾದ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಎಲ್ಲರೂ ಜೀವನದ ಸನ್ಮಾರ್ಗದಲ್ಲಿ ನಡೆದು ಸುಂದರ ಬದುಕು ನಡೆಸಬೇಕು ಎಂದು ತಿಳಿಸಿದರು.
ಬಳೂಟಗಿ ಶ್ರೀ ಶಿವಕುಮಾರ ದೇವರು ಪ್ರವಚನ ನಡೆಸಿಕೊಟ್ಟರು. ಶ್ರೀ ಮಠದ ಉತ್ತರಾಧಿಕಾರಿ ಮಲ್ಲಿಕಾರ್ಜುನ ಸ್ವಾಮೀಜಿ, ಡಾ. ಉಮಾದೇವಿ, ಡಾ.ಬಿ.ಜಿ. ಜವಳಿ, ಪವನ ಮೇಟಿ, ವಿ.ಎಸ್. ಗಟ್ಟಿ, ರಾಜಾಬಕ್ಷಿ ಬೆಟಗೇರಿ, ಧ್ರುವಕುಮಾರ ಹೂಗಾರ, ಮಂಜುನಾಥ ಶಿವಶೆಟ್ಟರ್, ಇತರರು ಉಪಸ್ಥಿತರಿದ್ದರು.
ಸೋಮನಾಥ ಗವಾಯಿ, ನಾಗಭೂಷಣ ಹಿರೇಮಠ ಸಂಗೀತ ಸೇವೆ ನಡೆಸಿಕೊಟ್ಟರು. ಶಿಕ್ಷಕ ಎಸ್.ಎಸ್. ಇನಾಮತಿ ಕಾರ್ಯಕ್ರಮ ನಿರೂಪಿಸಿದರು.
EndFragment