ಜಿಲ್ಲೆ

ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸಭೆ

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಬಾಸೆಲ್ ಮಿಶನ್ ಪ್ರಾಯೋಗಿಕ ಶಾಲೆ ಆವರಣದಲ್ಲಿ ಧಾರವಾಡ ಶಹರ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರಿ ಸಂಘದ 10ನೇ ವಾರ್ಷಿಕ ಸರ್ವ ಸಾಧರಣಾ ಸಭೆಯನ್ನು ಸೋಮವಾರ ನಡೆಸಲಾಯಿತು.
ಜಿಲ್ಲಾ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಲ್ಸನ್ ಮೈಲಿ ಮಾತನಾಡಿ, ಸಂಘಕ್ಕೆ ಸಂಘಟನೆ ಅವಶ್ಯಕ. ಅದಕ್ಕೆ ಪೂರಕವಾಗಿ ಶಿಕ್ಷಕರು ಸಂಘನಾತ್ಮಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು. ಸಂಘವು 30,000 ರೂ. ಸಾಲ ನೀಡುವುದರ ಮೂಲಕ ಆರಂಭವಾದ ಪತ್ತಿನ ಸಹಕಾರಿ ಸಂಘವು ಈಗ 4 ಲಕ್ಷ ರೂ. ಸಾಲ ನೀಡುವಷ್ಟು ಬೆಳೆದಿದೆ. ಎಲ್ಲರ ಸಹಕಾರ, ಬೆಂಬಲದಿಂದ 10 ವರ್ಷಗಳಲ್ಲಿ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.
ಡಾ. ರಾಮು ಮೂಲಗಿ ಜಾನಪದ ಹಾಡು ಪ್ರಸ್ತುತಪಡಿಸಿದರು. ಧಾರವಾಡ ಶಹರದಲ್ಲಿ ಸೇವಾ ನಿವೃತ್ತಿ ಹೊಂದಿದ 11 ಜನ ಶಿಕ್ಷಕರನ್ನು ಸನ್ಮಾನಿಸಲಾಯಿತು. ಎಸ್.ಎಂ.ಹೂಗಾರ, ಪಿ.ಎಸ್.ಸುಧಾಮಣಿ, ರೂತ್ ಗೋಕಾವಿ, ಆರ್.ಕೆ. ಬಳಗಾನೂರು, ಎಂ.ಜಿ.ಕರೀಕಟ್ಟಿ, ಜಾನ ಬಂಡೇಲಾ, ಎಂ.ಸಿ. ಚಲವಾದಿ, ಆರ್.ಐ.ಪಡನೂರ, ವಿ.ವಿ.ಕುಲಕರ್ಣಿ, ಇತರರು ಇದ್ದರು.
ಎಫ್.ಟಿ. ಕೆಮ್ಮಣಕೇರಿ ಸ್ವಾಗತಿಸಿದರು. ಪಿ.ಎಸ್.ಹಿರೇಮಠ ನಿರೂಪಿಸಿದರು. ಎಸ್.ಎಸ್. ಕತ್ತೆಬೆನ್ನೂರು ವಂದಿಸಿದರು.