ನುಗ್ಗೇಹಳ್ಳಿ: ಹೋಬಳಿಯ ಕಲ್ಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಭಾಗ್ಯಮ್ಮ ನಾಗೇಗೌಡ ಅವಿರೋಧ ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ವಾಸಿಂ ಘೋಷಿಸಿದರು.
ರಾಜ್ಯ ಮಾರಾಟ ಮಂಡಲದ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮಿಗೌಡ ಅಭಿನಂದಿಸಿ ಮಾತನಾಡಿ, ಜನವರಿಯಿಂದ ರಾಗಿ ಖರೀದಿ ಕೇಂದ್ರ ಆರಂಭವಾಗಲಿದೆ. ಕೊಬ್ಬರಿ ಬೆಲೆಯಲ್ಲಿ ಕುಸಿತ ಕಾಣುತ್ತಿರುವ ಹಿನ್ನೆಲೆಯಲ್ಲಿ 12 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಬಂದರೆ ನೆಪೆಡ್ ಮೂಲಕ ಖರೀದಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಮಧು, ಸಂಘದ ಕಾರ್ಯನಿರ್ವಹಣಾಧಿಕಾರಿ ಶರ್ಮಾ, ಉಪಾಧ್ಯಕ್ಷೆ ಪುಷ್ಪಾ ರಮೇಶ್, ನಿರ್ದೇಶಕರಾದ ಇ. ಶಿವಣ್ಣ, ಸಂತೋಷ ಕುಮಾರ, ರಂಗಮ್ಮ, ಮರೀಗೌಡ, ಹೊಂಬೇಗೌಡ ಇತರರ ಇದ್ದರು.