ಕಲಬುರಗಿ: ಮನೆ ಕೆಲಸದವಳ ಜತೆ ಅಕ್ರಮ ಸಂಬAಧದ ಅನುಮಾನ ಮಾಡಿದ ಪತ್ನಿ, ತನ್ನ ಪತಿಯ ಕಾಲು ಮುರಿಯಲು ಐದು ಲಕ್ಷ ರೂ.ಗಳ ಸುಪಾರಿ ನೀಡಿದ್ದಲ್ಲದೇ ಕಾಲು ಮುರಿಸಿದ್ದಾಳೆ. ಈ ಕುರಿತು ಪುತ್ರ ನೀಡಿದ ದೂರಿನಂತೆ ತನಿಖೆ ನಡೆಸಿದ ಪೊಲೀಸರು ಪತ್ನಿ ಸೇರಿ ನಾಲ್ವರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ತಿಳಿಸಿದರು.
ಕಾಲು ಮುರಿದುಕೊಂಡ ವ್ಯಕ್ತಿ ನಗರದ ಅತ್ತರ ಕಾಂಪೌAಡ್ ನಿವಾಸಿ ವೆಂಕಟೇಶ ಮಾಲಿ ಪಾಟೀಲ್ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬAಧ ಪತ್ನಿ ಉಮಾದೇವಿ, ಸುಪಾರಿ ಪಡೆದಿದ್ದ ಆರೀï, ಮನೋಹರ, ಸುನೀಲನನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ವೆಂಕಟೇಶ ಪುತ್ರ ನೀಡಿದ ದೂರಿನಂತೆ ಬ್ರಹ್ಮಪುರ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದು, ಘಟನೆ ನಡೆದ ವಿಠ್ಠಲ ನಗರ ಸುತ್ತಮುತ್ತಲಿನ ಸಿಸಿ ಕ್ಯಾಮರಾಗಳಲ್ಲಿನ ವಿಡಿಯೋ ವೀಕ್ಷಿಸಿ, ಆರೋಪಿಗಳನ್ನು ಪತ್ತೆ ಮಾಡಿದರು. ನಂತರ ವಿಚಾರಣೆಯಿಂದ ವೆಂಕಟೇಶ ಪತ್ನಿಯೇ ಕಾಲು ಮುರಿಯಲು ೫ ಲಕ್ಷ ರೂ. ಸುಪಾರಿ ನೀಡಿದ್ದು, ೫೦ ಸಾವಿರ ರೂ. ಮುಂಗಡ ನೀಡಿದ್ದಾಳೆ ಎಂದು ಬಾಯಿ ಬಿಟ್ಟಿದ್ದರು. ಪರಿಣಾಮ ಪತ್ನಿ ಉಮಾದೇವಿಯನ್ನು ಠಾಣೆಗೆ ಕರೆ ತಂದು ವಿಚಾರಿಸಿದಾಗ ಇಡೀ ಘಟನೆ ಹೊರಬಿದ್ದಿದೆ ಎಂದು ತಿಳಿಸಿದರು.
ಮನೆ ಕೆಲಸದವಳ ಜತೆಗೆ ಪತಿ ಸಲುಗೆಯಿಂದ ಇರುವುದು ಸರಿ ಕಾಣಿಸಲಿಲ್ಲ. ಸುಮ್ಮನೆ ಮನೆಯಲ್ಲಿ ಕೈ ಕಾಲು ಮುರಿದುಕೊಂಡು ಮನೆಯಲ್ಲಿ ಬೀಳಬೇಕು ಎನ್ನುವ ಕಾರಣಕ್ಕೆ ಹುಡುಗರಿಗೆ ಹಣ ನೀಡಿ, ಕಾಲು ಮುರಿಸಿರುವುದಾಗಿ ಉಮಾದೇವಿ ಬಾಯಿ ಬಿಟ್ಟಿದ್ದಾಳೆ ಎಂದು ತಿಳಿಸಿದರು. ತನಿಖೆ ನಡೆಸಿದ ಬ್ರಹ್ಮಪುರ ಪೊಲೀಸ್ ಠಾಣೆ ತಂಡದ ಕಾರ್ಯ ಶ್ಲಾಘಿಸಿದರು.
ಒಂದು ತಿಂಗಳಲ್ಲಿ ೨೯ ಲP್ಷÀ ರೂ ದಂಡ: ಕಲಬುರಗಿ ನಗರ ವ್ಯಾಪ್ತಿಯಲ್ಲಿ ಒಂದು ತಿಂಗಳಲ್ಲಿ ವಿವಿಧ ರೀತಿಯ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ೫,೧೦೬ ಪ್ರಕರಣಗಳಲ್ಲಿ ೨೯ ಲP್ಷÀ ರೂ. ದಂಡ ವಸೂಲಿ ಮಾಡಲಾಗಿದೆ. ೨೦೨೫ರ ಜ೧ರಿಂದ ನಗರದಲ್ಲಿ ಸಂಚಾರ ನಿಯಮ ಪಾಲನೆ ಬಗ್ಗೆ ಜಾಗÊತಿ ಮೂಡಿಸುವ ಜತೆಗೆ ನಿಯಮ ಪಾಲಿಸದವರಿಗೆ ದಂಡ ವಿಧಿಸಲಾಗಿದೆ ಎಂದು ಕಮೀಷನರ್ ಡಾ.ಶರಣಪ್ಪ ಎಸ್.ಡಿ.ತಿಳಿಸಿದರು.
ಇ-ಚಾಲನ್ ಮೂಲಕ ಪರಿಶೀಲಿಸಿ, ದಂಡ ವಿಧಿಸಲಾಗಿದೆ. ಸಿಗ್ನಲ್ ಜಂಪ್ ಉಲ್ಲಂಘಿಸಿದ ೫೬೬ಪ್ರಕರಣಕ್ಕೆ ೨.೮೫ ಲಕ್ಷ ರೂ. ದಂಡ, ಡ್ರಿಂಕ್, ಡ್ರೆÊವ್ ೫೫ ಕೇಸ್‌ಗೆ ೪.೭೧ ಲಕ್ಷ ರೂ., ಓವರ್ ಸ್ಪೀಡ್‌ನ ೧೧೭ ಕೇಸ್‌ಗೆ ೧.೧೮ ಲಕ್ಷ ರೂ., ಆಟೋಗಳಲ್ಲಿ ಹೆಚ್ಚು ಪ್ರಯಾಣಿಕರನ್ನು ಹಾಕಿದ್ದಕ್ಕೆ ೧೨೫೭ ಪ್ರಕರಣ ದಾಖಲಿಸಿ ೨.೫೯ ಲಕ್ಷ ರೂ., ತ್ರಿಬಲ್ ರೈಡಿಂಗ್ ೩೨೨ ಪ್ರಕರಣಗಳಲ್ಲಿ ೧.೬೧ ಲಕ್ಷ ರೂ. ಸೇರಿ ವಿವಿಧ ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ ೨೯.೧೧ ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ತಿಳಿಸಿದರು.