ಅಫಜಲಪುರ: ಬಂಕಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಕರ ವಸೂಲಿಗಾರ(ಬಿಲ್ ಕಲೆಕ್ಟರ್) ಪತ್ನಿ ಆಯ್ಕೆಯಾಗಿದ್ದಾರೆ. ಬುಧವಾರ ಜರುಗಿದ ಚುನಾವಣೆಯಲ್ಲಿ ಬೋಸಗಾ ಗ್ರಾಮದ ಸದಸ್ಯೆ ರೂಪಾ ದೊಡ್ಡಮನಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಇವರ ಪತಿ ಚಂದ್ರಕಾಂತ ಕಳೆದ ೧೦ ವರ್ಷಗಳಿಂದ ಬಂಕಲಗಾ ಗ್ರಾಪಂನಲ್ಲಿ ಕರ ವಸೂಲಿಗಾರರಾಗಿ ಕೆಲಸ ಮಾಡುತ್ತಿದ್ದಾರೆ.
ಎರಡನೇ ಅವಧಿಗಾಗಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಬಿ)ಕ್ಕೆ ಮೀಸಲಿತ್ತು. ಕ್ರಮವಾಗಿ ರೂಪಾ ದೊಡ್ಡಮನಿ ಹಾಗೂ ಧೋಂಡಿಬಾ ದಳಪತಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು ಎಂದು ಚುನಾವಣಾ ಅಧಿಕಾರಿ ಮಾರುತಿ ಹುಜರತಿ ತಿಳಿಸಿದರು.
ಪ್ರಮುಖರಾದ ವಿಠ್ಠಲ್ ಜಾಮಗೊಂಡ, ಬಸವರಾಜ ಮೋಟೆ, ಕಲ್ಲಪ್ಪ ಪ್ಯಾಟಿ, ಸಿದ್ದುಗೌಡ ಪಾಟೀಲï, ಸದಸ್ಯರಾದ ತುಕಾರಾಮ ಕಾಂಬಳೆ, ಸವಿತಾ ಕಾಂಬಳೆ, ಗಣಪತಿ ಬಿರಾದಾರ, ಶ್ರೀಶೈಲ ಪೂಜಾರಿ, ಪುಂಡಲೀಕ ಬಿರಾದಾರ, ಮಲಕವ್ವ ಮಾಣಸೂಣಗಿ, ಶಿವಪ್ಪ ಐಹೊಳೆ, ಶ್ರೀದೇವಿ ಪೂಜಾರಿ, ರೇವಣ್ಣ ಪಡೇರ, ನಾಗುಬಾಯಿ ಜಾನಕರ್, ಸವಿತಾ ಕಾಳೆ ಇತರರಿದ್ದರು.