ಜಿಲ್ಲೆ

ಪತಂಜಲಿಯಿಂದ ವಿಶ್ವ ಧ್ಯಾನ ದಿನಾಚರಣೆ

Dharwada - Santosh Vaidya

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಪತಂಜಲಿ ಯೋಗ ಸಮಿತಿ ಕರ್ನಾಟಕದ ವತಿಯಿಂದ ಹುಬ್ಬಳ್ಳಿಯಲ್ಲಿರುವ ಪತಂಜಲಿ ಯೋಗ ಪೀಠದ ಕಚೇರಿಯಲ್ಲಿ ಶನಿವಾರ ಯೋಗ, ಅಗ್ನಿಹೋತ್ರದೊಂದಿಗೆ ವಿಶ್ವ ಧ್ಯಾನ ದಿನ ಆಚರಿಸಲಾಯಿತು.

ಪತಂಜಲಿ ಯೋಗ ಪೀಠದ ಕರ್ನಾಟಕ ರಾಜ್ಯ ಪ್ರಭಾರಿ, ಯೋಗ ಗುರು ಭವರಲಾಲ ಆರ್ಯ ಯೋಗ, ಅಗ್ನಿಹೋತ್ರ, ಧ್ಯಾನದ ಬಗ್ಗೆ ಮಾರ್ಗದರ್ಶನ ಮಾಡಿದರು. ಈ ವೇಳೆ ಮಾತನಾಡಿದ ಅವರು, ವಿಶ್ವಸಂಸ್ಥೆಯು ಡಿ. 21ನ್ನು ವಿಶ್ವ ಧ್ಯಾನ ದಿನ ಎಂದು ಘೊಷಿಸಿದೆ. ಯೋಗ, ಅಗ್ನಿಹೋತ್ರ, ಧ್ಯಾನ ನಮ್ಮ ಸನಾತನ ಪರಂಪರೆ. ಇವುಗಳನ್ನು ಪ್ರತಿಯೊಬ್ಬರೂ ನಿತ್ಯ ಅಭ್ಯಾಸ ಮಾಡಬೇಕು. ಯೋಗ, ಅಗ್ನಿಹೋತ್ರ, ಧ್ಯಾನದಿಂದ ಮಾನಸಿಕ, ದೈಹಿಕ ಸಮಸ್ಯೆಗಳೆಲ್ಲ ನಿವಾರಣೆಯಾಗುತ್ತದೆ ಎಂದರು.

ಖಿನ್ನ್ನೆಯಿಂದ ಬಳಲುತ್ತಿರುವವರು ಅರ್ಧ ಗಂಟೆ ಅಥವಾ ಒಂದು ಗಂಟೆ ನಿರಂತರ ಧ್ಯಾನ ಮಾಡಬೇಕು. ಇಂದಿನ ಒತ್ತಡದ ಜೀವನದಲ್ಲಿ ಮನುಷ್ಯ ಯಂತ್ರದಂತೆ ಕೆಲಸ ಮಾಡುತ್ತಿದ್ದಾನೆ. ನಿತ್ಯವೂ ‘ಓಂಕಾರ’ ಉಚ್ಛಾರಣೆ ಮಾಡಿದರೆ ದೈವಿಕ ಶಕ್ತಿ ಜಾಗೃತವಾಗುತ್ತದೆ. ಸೂರ್ಯೋದಯಕ್ಕೆ ಒಂದೂವರೆ ಗಂಟೆ ಮೊದಲು ಕನಿಷ್ಠ 11ರಿಂದ 108 ಬಾರಿ ಓಂ ಕಾರ ಉಚ್ಛಾರಣೆ ಮಾಡಬೇಕು. ಪತಂಜಲಿ ಯೋಗ ಸಮಿತಿಯಿಂದ ಉಚಿತವಾಗಿ ಇವುಗಳ ತರಬೇತಿಯನ್ನು ಕರ್ನಾಟಕ ರಾಜ್ಯಾದ್ಯಂತ ನೀಡುತ್ತಿದ್ದೇವೆ ಎಂದು ತಿಳಿಸಿದರು.

ವಾಮನ ಶಾನಭಾಗ, ಮಹೇಶ ಕೊಟ್ಟಿಗೆರೆ, ಡಾ. ನಳಿನಿ ಮಗದುಮ್ ರಾಜಶೇಖರ ಕುದರಿ, ಮುತ್ತಪ್ಪ ನಲವಾಡಿ, ವಿದ್ಯಾ ಜೋಶಿ, , ಉಪೇಂದ್ರ ಜೋಶಿ, ಅಕ್ಷಯ, ವಿಜಯ, ರೂಪಾ, ದೇವೇಂದ್ರ, ಮುಂತಾದವರು ಉಪಸ್ಥಿತರಿದ್ದರು.