ಚಿಕ್ಕಮಗಳೂರಿನ ಸುವರ್ಣಮಾಧ್ಯಮ ಭವನದ ಚಿಕ್ಕೊಳಲೆ ಸದಾಶಿವಶಾಸ್ತಿç ಸಭಾಂಗಣದ ಆವರಣದಲ್ಲಿ ಮಾಧ್ಯಮಸಂಸ್ಕೃತಿ ಪ್ರತಿಷ್ಠಾನ, ಶ್ರೀ ದೇವಿ ಗುರುಕುಲ ಹಾಗೂ ಶ್ರೀ ಪಾರ್ವತಿ ಮಹಿಳಾಮಂಡಳಿಯಿAದ ಆಯೋಜಿಸಲಾಗಿದ್ದ ಅಂತರಾಷ್ಟಿçÃಯ ಯೋಗ ದಿನಾಚರಣೆಯಲ್ಲಿ ಯೋಗ ಗುರು ಶೈಲಜಾ ಬಸವರಾಜು ಅವರನ್ನು ಸನ್ಮಾನಿಸಲಾಯಿತು. 
ಜಿಲ್ಲೆ

ಪತಂಜಲಿ ಮುನಿಗಳ ಯೋಗ ಸೂತ್ರ

ಚಿಕ್ಕಮಗಳೂರು: ಪ್ರಾಚೀನ ಪರಂಪರೆಯ ಯೋಗಸೂತ್ರವನ್ನು ಪತಂಜಲಿ ಮುನಿಗಳು ರಚಿಸಿದ್ದಾರೆ ಎಂದು ಯೋಗ ಶಿಕ್ಷಕಿ ಶೈಲಜಾ ಬಸವರಾಜು ತಿಳಿಸಿದರು.

ಮಾಧ್ಯಮಸಂಸ್ಕೃತಿ ಪ್ರತಿಷ್ಠಾನ, ಶ್ರೀ ದೇವಿ ಗುರುಕುಲ ಹಾಗೂ ಶ್ರೀ ಪಾರ್ವತಿ ಮಹಿಳಾಮಂಡಳಿ ಸಂಯುಕ್ತವಾಗಿ ಸುವರ್ಣಮಾಧ್ಯಮ ಭವನದ ಚಿಕ್ಕೊಳಲೆ ಸದಾಶಿವಶಾಸ್ತಿç ಸಭಾಂಗಣದ ಆವರಣದಲ್ಲಿ ಆಯೋಜಿಸಿದ್ದ ವಿಶ್ವ ಯೋಗ ದಿನದಲ್ಲಿ ಯೋಗ ತರಬೇತಿ ನೀಡಿ, ಗೌರವ ಸ್ವೀಕರಿಸಿ ಮಾತನಾಡಿದರು.

ದೇಹ, ಮನಸ್ಸು ಮತ್ತು ಬುದ್ಧಿಯನ್ನು ಸುಸ್ಥಿತಿಯಲ್ಲಿಡಲು ಯೋಗ ಸಹಕಾರಿ. ಮಾನವನ ಬದುಕಿಗೆ ಅತ್ಯಂತ ಉಪಯುಕ್ತವಾದ ಯೋಗವನ್ನು ಜಗತ್ತಿಗೆ ವ್ಯಾಪಕವಾಗಿ ಪರಿಚಯಿಸಿ ವಿಶ್ವಾದ್ಯಂತ ಯೋಗ ದಿನಾಚರಣೆಗೆ ಪ್ರಧಾನಿ ನರೇಂದ್ರಮೋದಿ ಕಾರಣೀಭೂತರಾಗಿರುವುದು ಹೆಮ್ಮೆಯ ಸಂಗತಿ ಎಂದರು.

ಶ್ರೀ ದೇವಿ ಗುರುಕುಲದ ಸಂಸ್ಥಾಪಕ ವಿದ್ವಾನ್ ಡಾ.ದಯಾನಂದ ಮೂರ್ತಿ ಶಾಸ್ತಿç ಅಧ್ಯಕ್ಷತೆ ವಹಿಸಿ ಮಾತನಾಡಿ, ಯೋಗ ಮನುಷ್ಯನ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ. ಯೋಗದಿಂದ ಬಹುತೇಕ ರೋಗಗಳನ್ನು ನಿಯಂತ್ರಿಸಬಹುದು. ಪ್ರತಿನಿತ್ಯ ಯೋಗಾಭ್ಯಾಸ ದೇಹಾರೋಗ್ಯ ಸುಸ್ಥಿತಿಗೆ ಸಹಕಾರಿ ಎಂದು ಹೇಳಿದರು.

ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭುಲಿಂಗ ಶಾಸ್ತಿç ಮಾತನಾಡಿ, ಜೂನ್ ೨೧ ವರ್ಷದಲ್ಲಿ ಅತಿ ಹೆಚ್ಚು ಹಗಲು ಹೊಂದಿರುವ ದಿನ. ಹಗಲು ಎಂದರೆ ಬೆಳಕು. ಬೆಳಕು ಜ್ಞಾನ, ಕಲ್ಯಾಣ, ಪ್ರಗತಿಯ ಧ್ಯೋತಕ. ಇದೇ ದಿನವನ್ನು ವಿಶ್ವಾದ್ಯಂತ ೧೭೧ಕ್ಕೂ ರಾಷ್ಟçಗಳಲ್ಲಿ ಲಕ್ಷಾಂತರ ಮಂದಿ ಸಾಮೂಹಿಕವಾಗಿ ಯೋಗ ಆಚರಣೆಗೆ ವಿಶ್ವಸಂಸ್ಥೆ ಅನುವು ಮಾಡಿಕೊಟ್ಟಿರುವುದು ಅರ್ಥಪೂರ್ಣ ಎಂದು ಶ್ಲಾಘಿಸಿದರು.

ಸನಾತನ ಪರಂಪರೆಯ ಕೊಡುಗೆಯಾದ ಯೋಗ ಧರ್ಮದ ವಿಷಯಕ್ಕಿಂತ ಆರೋಗ್ಯದ ಸಂಗತಿ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಯೋಗದ ಉಪಯೋಗಗಳನ್ನು ಸರಿಯಾಗಿ ಅರಿತವರು ಯೋಗವನ್ನು ಆಶ್ರಯಿಸುವುದು ಅನಿವಾರ್ಯವಾಗುತ್ತದೆ. ಯೋಗ ಬುದ್ಧಿ-ಭಾವಗಳ ವಿಕಾಸಕ್ಕೆ ಪೂರಕ. ರೋಗ ಮುಕ್ತರಾಗಲು ಯೋಗವನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಕೇವಲ ಆಸನ ಮುದ್ರೆಗಳಷ್ಟೆ ಯೋಗವಲ್ಲ. ನಿಜವಾದ ಯೋಗ ಅರಿತು ಅಭ್ಯಾಸ ಮಾಡುವುದರಿಂದ ಮಾನವನ ವಿಕಾಸಕ್ಕೆ ಉಪಯುಕ್ತ ಎಂದರು.

ಶ್ರೀ ಪಾರ್ವತಿ ಮಹಿಳಾ ಮಂಡಳಿಯ ಅಧ್ಯಕ್ಷೆ ಸುಮಿತ್ರಾಶಾಸ್ತಿç, ಶ್ರೀ ದೇವಿ ಗುರುಕುಲದ ನಂದಿನಿ, ಎಸ್.ಶೈಲಾ ಬಸವರಾಜ್, ಎಚ್.ಮಹಾಲಿಂಗಯ್ಯ, ವಿಜಯಕುಮಾರ್, ಶಿವಣ್ಣ, ಶಿವಮೂರ್ತಿ ಗುರೂಜಿ, ಸರೋಜಮ್ಮ, ಪುಷ್ಪಾ ಕುಮಾರಸ್ವಾಮಿ, ವಿಶಾಲ ಯೋಗೀಶ್, ಶಾರದಾ, ಅನ್ನಪೂರ್ಣ, ಕಮಲಾಕ್ಷಿ ನೇತೃತ್ವದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ನಡೆಯಿತು.