ಕೆ.ಎಚ್.ಸೋಮಾಪೂರ 
ಜಿಲ್ಲೆ

ಪತಂಗ ಕೃತಿಗೆ ಸಮೀರವಾಡಿ ದತ್ತಿ ಪ್ರಶಸ್ತಿ

ಸಿಂದಗಿ: ಪಟ್ಟಣದ ಆರ್.ಡಿ.ಪಾಟೀಲ ಪದವಿ ಪೂರ್ವ ಮಹಾವಿದ್ಯಾಲಯದ ವಿಶ್ರಾಂತ ದೈಹಿಕ ಶಿಕ್ಷಣ ಉಪನ್ಯಾಸಕ ಕೆ.ಎಚ್. ಸೋಮಾಪೂರ ಅವರ ಪತಂಗ (ಸಣ್ಣ ಕತೆಗಳ ಸಂಕಲನ) ಕೃತಿಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ಕಥಾ ವಿಭಾಗದ ಸಮೀರವಾಡಿ ಸಾಹಿತ್ಯ ಸಮ್ಮೇಳನದ ದತ್ತಿ ಪ್ರಶಸ್ತಿ ಲಭಿಸಿದೆ.

ಸಾಹಿತಿ ಸೋಮಾಪೂರ ಅವರು ದೈಹಿಕ ಶಿಕ್ಷಕರಾದರೂ ಸಾಹಿತ್ಯ ಕೃಷಿಯಲ್ಲಿಯೂ ತೊಡಗಿದ್ದಾರೆ. ಅವರ ಗರ್ದಿ ಗಮ್ಮತ್ತು, ಗಂಗೆತ್ತು, ಡೊಂಬರಾಟ ಕವನ ಸಂಕಲನ, ಪತಂಗ, ಸಂಶಯ ಹಾಗೂ ಸಕ್ಕಾಸರಗಿ ಕಥಾ ಸಂಕಲನ, ಬಾ ಬೆಳಕಿನೆಡೆಗೆ ಚಿಂತನಕೃತಿ, ಸಂಘರ್ಷ ಏಕಾಂಕ ನಾಟಕ, ಬಯಕೆಗಳ ಬೆನ್ನೇರಿ ಕಾದಂಬರಿ ಹಾಗೂ ಭಾವ-ಬಂಧ ಜಲಷಟ್ಪದಿ ಎಂಬ ಸಾಹಿತ್ಯ ಕೃತಿಗಳ ಕೊಡುಗೆ ನೀಡಿರುವುದನ್ನು ಸ್ಮರಿಸಬಹುದು. ಜಮಖಂಡಿಯಲ್ಲಿ ಅ.13 ರಂದು ನಡೆಯಲಿರುವ ವಿಜಯಪುರ ಜಿಲ್ಲಾ 7ನೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮೀರವಾಡಿ ದತ್ತಿ ಪ್ರಶಸ್ತಿ ಪ್ರದಾನ ನಡೆಯಲಿದೆ.