ಹಾರೂಗೇರಿ: ಸಾಲ ತೆಗೆದುಕೊಳ್ಳುವಾಗ ಯಾವ ರೀತಿ ಸೌಜನ್ಯದಿಂದ ವರ್ತಿಸುವರೋ ಸಾಲ ಪಾವತಿಸುವಾಗಲೂ ಸೌಜನ್ಯದಿಂದ ಇರಬೇಕು ಎಂದು ಭಾರತ್ ಕೋ&ಆಪ್ ಕ್ರೆಡಿಟ್ ಸೊಸೈಟಿ ಅಧ್ಯ ಈರನಗೌಡ ಪಾಟೀಲ ಹೇಳಿದರು.
ಪಟ್ಟಣದ ಎಂ.ಬಿ.ಪಾಟೀಲ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಸೊಸೈಟಿಯ 21ನೇ ವಾರ್ಷಿಕ ಸರ್ವ ಸಾಧಾರಣ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸೊಸೈಟಿಯು 1.1 ಕೋಟಿ ರೂ.ಷೇರು ಬಂಡವಾಳ, ಸದಸ್ಯರ ಠೇವಣಿ 39.94 ಕೋಟಿ ರೂ. ಹಾಗೂ ವಿವಿಧ ಬ್ಯಾಂಕುಗಳಲ್ಲಿ 20.71 ಕೋಟಿ ರೂ.ಠೇವಣಿ, 17.54 ಕೋಟಿ ರೂ. ಸಾಲ ವಿತರಿಸಿದ್ದು, 31 ಲ ರೂ.ಲಾಭ ಗಳಿಸಿದೆ. ಒಟ್ಟು 45 ಕೋಟಿ ರೂ ವಹಿವಾಟು ಹೊಂದಿದೆ. ಸದಸ್ಯರ ಸಂಖ್ಯೆ 1,363 ಇದ್ದು, ಇ&ಸ್ಟಾಂಪಿಂಗ್ ವ್ಯವಸ್ಥೆ, ಸಂಪೂರ್ಣ ಗಣಕೀಕೃತ ವ್ಯವಸ್ಥೆಯೊಂದಿಗೆ ಸಂವು ಆರ್ಟಿಜಿಎಸ್ ಮತ್ತು ಎನ್ಈಎ್ಟಿ ವ್ಯವಸ್ಥೆ ಚಾಲ್ತಿಯದೆ ಎಂದರು.
ಎಸ್ಎಸ್ಎಲ್ಸಿ, ಪಿಯುಸಿ ಪರೀೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಪ್ರೋತ್ಸಾಹ ಧನ ನೀಡಲಾಯಿತು. ಜಿಲ್ಲಾಮಟ್ಟ ಹಾಗೂ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪುರಸತ ಶಿಕರು, ಪತ್ರಕರ್ತರನ್ನು ಸನ್ಮಾನಿಸಲಾಯಿತು. ವ್ಯವಸ್ಥಾಪಕ ಎಸ್.ಎಂ.ಮಧುರಖಂಡಿ ವಾರ್ಷಿಕ ವರದಿ ವಾಚನ ಮಾಡಿದರು. ಉಪಾಧ್ಯ ಕರೆಪ್ಪ ಪೂಜೇರಿ, ನಿರ್ದೇಶಕರಾದ ಪರಗೌಡ ಪಾಟೀಲ, ಸುನೀಲ ಪಾಟೀಲ, ಮಹಾವೀರರಾಮತೀರ್ಥ, ವೀರಭದ್ರ ಖಡಕಬಾವಿ, ಅಲಗೌಡ ಆಸಂಗಿ, ಅಪ್ಪಣ್ಣ ಕುಂಬಾರ, ದೊಡ್ಡಕ್ಕ ಪಾಟೀಲ, ಕಲ್ಪನಾ ಸದಲಗಿ, ಜಯಶ್ರೀ ಇಂಚಲಕರಂಜಿ, ಮಹಾಂತೇಶ ತಳವಾರ, ಸುರೇಶ ಅರಕೇರಿ ಹಾಗೂ ಸೊಸೆಟಿ ಸಿಬ್ಬಂದಿ ಇದ್ದರು. ಶಿವಪ್ಪ ಮಠಪತಿ ನಿರೂಪಿಸಿ, ವಂದಿಸಿದರು.