ಬಾಗಲಕೋಟೆ ನಗರದ ಜಿ.ಪಂ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ತ್ರೆÊಮಾಸಿಕ ಕೆಡಿಪಿ ಸಭೆಯಲ್ಲಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿದರು.  
ಜಿಲ್ಲೆ

ಪಡಿತರ ಕಾಳಸಂತೆಕೋರರ ಮಟ್ಟಹಾಕಿ

ಬಾಗಲಕೋಟೆ: ಜಿಲ್ಲೆಯಲ್ಲಿ ಕಬಂಧಬಾಹು ಚಾಚಿರುವ ಅಕ್ಕಿ ಹಾಗೂ ಹಾಲಿನಪುಡಿ ಪಾಕೇಟ್ ಅಕ್ರಮಕೋರರನ್ನು ಸಂಪೂರ್ಣ ಮಟ್ಟಹಾಕಬೇಕು. ಬರೀ ಕೆಳ ಹಂತದವರ ವಿರುದ್ಧ ಕ್ರಮ ಆಗದೇ ದೊಡ್ಡ ದೊಡ್ಡ ಕುಳಗಳಿಗೆ ಬಲೆಹಾಕಬೇಕು ಎಂದು ಆಹಾರ ಮತ್ತು ನಾಗರಿಕ ಇಲಾಖೆ ಅಽಕಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಖಡಕ್ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಮುಂದುವರೆದ ತ್ರೆÊಮಾಸಿಕ ಕೆಡಿಪಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಈ ನಿರ್ದೇಶನ ಮಾಡಿದರು.

ಆಹಾರ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಜಿಲ್ಲೆಯಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಪಡಿತರ ಅಕ್ಕಿ, ಬಿಸಿಯೂಟದ ಅಕ್ಕಿ ಹಾಗೂ ಕ್ಷೀರಭಾಗ್ಯದ ಹಾಲಿನ ಪುಡಿ ಪಾಕೇಟ್ ಅಕ್ರಮವಾಗಿ ಸಂಗ್ರಹ ಹಾಗೂ ಮಾರಾಟದ ಬಗ್ಗೆ ಬೀಳಗಿ ಶಾಸಕ ಜೆ.ಟಿ.ಪಾಟೀಲ ಗಮನ ಸೆಳೆದರು. ಈ ವೇಳೆ ಜಿಲ್ಲೆಯಲ್ಲಿ ಅಕ್ರಮ ದಂಧೆ ನಡೆಯುತ್ತಿಲ್ಲ. ಬಯೋಮೆಟ್ರಿಕ್ ವ್ಯವಸ್ಥೆ ಇರುವುದರಿಂದ ಅಕ್ಕಿ ದುರುಪಯೋಗ ಆಗುತ್ತಿಲ್ಲ ಎಂದು ಅಽಕಾರಿ ಶ್ರೀಶೈಲ ಕಂಕಣವಾಡಿ ಸಮರ್ಥನೆ ಮಾಡಿಕೊಂಡರು. ಇದನ್ನು ಒಪ್ಪದ ಶಾಸಕ ಜೆ.ಟಿ.ಪಾಟೀಲ, ಇಲ್ಲಿ ನೀವು ಕಾನೂನು ಹೇಳಬೇಡಿ. ನೀವು ಚಾಪಿ ಹಾಸಿದರೆ ಅವರು ರಂಗೋಲಿ ಕೆಳಗೆ ನುಗ್ಗುತ್ತಾರೆ ಎಂದರು.

ಆಗ ಮಧ್ಯಪ್ರವೇಶಿಸಿದ ಸಚಿವರು, ಬಾಗಲಕೋಟೆ ಜಿಲ್ಲೆಯಲ್ಲಿ ನಾಲ್ಕೆÊದು ಜನ ದೊಡ್ಡ ದೊಡ ಅಕ್ರಮಕೋರರು ಇದ್ದಾರೆ. ಅದು ನಿಮ್ಮ ಗಮನಕ್ಕೆ ಇರಲಿ, ಅವರು ಬೇರೆ ಬೇರೆ ಜಿಲ್ಲೆಗಳಿಂದಲೂ ಈ ದಂಧೆ ನಡೆಸುತ್ತಿದ್ದಾರೆ. ನಮಗೆ ಗೊತ್ತಿದೆ. ಅಂಥವರ ವಿರುದ್ಧ ಏನು ಕ್ರಮ ತೆಗೆದುಕೊಂಡಿದ್ದೀರಿ? ಈ ವರೆಗೆ ಎಷ್ಟು ದಾಳಿ ನಡೆಸಿದ್ದೀರಿ? ಯಾರ ಮೇಲೆ ಕೇಸ್ ಹಾಕಿದ್ದೀರಿ ಎಂದು ಪ್ರಶ್ನಿಸಿದರು.

ಇದೇ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಅಮರನಾಥ ರೆಡ್ಡಿ ಅವರು, ಪೊಲೀಸ್ ಇಲಾಖೆಯಿಂದ ಅಕ್ರಮ ಅಕ್ಕಿ, ಹಾಲಿನಪುಡಿ ಪಾಕೇಟ್ ಸಂಗ್ರಹ ಹಾಗೂ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿರುವ ಬಗ್ಗೆ ಮಾಹಿತಿ ನೀಡಿದರು. ಈಗಾಗಲೇ ರಬಕವಿಯ ರಾಘವೇಂದ್ರ ತೇಲಿ ಮೇಲೆ ಅನೇಕ ಪ್ರಕರಣಗಳಿದ್ದು, ಅವರನ್ನು ಗಡಿಪಾರು ಮಾಡಲು ಅಗತ್ಯ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಹಾಗೆಯೇ ಬಾಗಲಕೋಟೆಯ ಗೋವಿಂದ ಹುರಕಡ್ಲಿ ಅವರ ಮೇಲೆಯೂ ನಾಲ್ಕು ಕೇಸುಗಳಾಗಿದ್ದು, ಅವರ ವಿರುದ್ಧವೂ ಅದೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್ಪಿ ಅವರು ಸಚಿವರು ಮತ್ತು ಶಾಸಕರ ಗಮನಕ್ಕೆ ತಂದರು. ಜೊತೆಗೆ ಮಕ್ಕಳಿಗೆ ವಿದ್ಯ, ಬುದ್ಡಿ ಕಲಿಸುವ ಶಿಕ್ಷಕರೇ ಮಕ್ಕಳ ಹಾಲಿನಪುಡಿ ಪಾಕೇಟ್ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಅವರ ಮೇಲೆ ಕಠಿಣ ಕ್ರಮ ಆಗಬೇಕು. ಅಕ್ರಮಕೋರರ ವಿರುದ್ಧ ಕೇಸ್ ಹಾಕಿದಾಗ ಅವರಿಗೆ ಬೇಗ ಜಾಮೀನು ಸಿಗದಂತೆ ಸಾಕ್ಷಿಗಳನ್ನು ಸಂಗ್ರಹಿಸುವ ಕಡೆಗೆ ಒತ್ತು ಕೊಡಿ ಎಂದು ಶಾಸಕ ಜೆ.ಟಿ.ಪಾಟೀಲ ಸೂಚಿಸಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪರಿಶೀಲನೆ ವೇಳೆ ಶಾಸಕ ಜೆ.ಟಿ.ಪಾಟೀಲ, ಅಽಕಾರಿಗಳ ಕಾರ್ಯವೈಕರಿ ಬಗ್ಗೆ ಗರಂ ಆಗಿ ಮಾತನಾಡಿದರು. ಇತ್ತೀಚಿಗೆ ಬೀಳಗಿ ಕ್ಷೇತ್ರದಲ್ಲಿ ರೈತರೊಬ್ಬರು ತಮ್ಮ ಜಮೀನು ಸಮತಟ್ಟು ಮಾಡಿ, ಹೆಚ್ಚಿನ ಮಣ್ಣು ಮಾರಾಟ ಮಾಡಿದ್ದಾನೆ ಎಂದು ೨.೩೭ ಲಕ್ಷ ರೂ. ದಂಡ ಹಾಕಿದ್ದಾರೆ. ರೈತರಿಗೆ ಇಷ್ಟು ದಂಡ ಹೊರೆ ಅಲ್ಲವೇ ಎಂದು ಪ್ರಶ್ನಿಸಿದರು. ಆಗ ತಮ್ಮ ಕ್ರಮವನ್ನು ಅಽಕಾರಿ ಸಮರ್ಥಿಸಿಕೊಂಡರು. ಇದರಿಂದ ಮತ್ತೆ ಗರಂ ಆದ ಶಾಸಕರು, ಜಿಲ್ಲೆಯಲ್ಲಿ ಮರಳು ದಂಧೆ ನಡೆಸುವವರ ಮೇಲೆ ದಂಡ ಹಾಕಲ್ಲ, ರೈತರ ಮೇಲೆ ಹಾಕುತ್ತೀರಾ? ಒಂದು ಟ್ರಿಪ್ ಗೆ ಪರವಾಣಿಗೆ ತೆಗೆದುಕೊಂಡು ಎಂಟತ್ತು ಟ್ರಿಪ್ ಮರಳು ಸಾಗಿಸುತ್ತಾರೆ. ಅದು ನಿಮಗೆ ಗೊತ್ತಿಲ್ಲವೆ? ನಾನೇ ತೋರಿಸಿಕೊಡುತ್ತೇನೆ, ಸಾಬೀತು ಪಡಿಸಿದರೆ ನಿಮ್ಮ ನೌಕರಿಗೆ ರಾಜೀನಾಮೆ ಕೊಡುತ್ತೀರಾ ಎಂದು ಮರು ಪ್ರಶ್ನೆ ಮಾಡಿದಾಗ ಅಽಕಾರಿ ಮೌನಕ್ಕೆ ಶರಣಾದರು. ಅಷ್ಟಕ್ಕೆ ಬಿಡದ ಶಾಸಕರು, ಗಣಿ ಇಲಾಖೆಯ ಸಂತೋಷ ಬೆನಕಟ್ಟಿ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಸಚಿವರ ಗಮನಕ್ಕೆ ತಂದರು.

ಇನ್ನು ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಲೋಶದ ಪರಿಶೀಲನೆ ವೇಳೆ, ಬಿಡುಗಡೆ ಆಗಿರುವ ಅನುದಾನ ಖರ್ಚು ಮಾಡುವಲ್ಲಿ ವಿ-Àಲವಾಗಿರುವ ಬಗ್ಗೆ ಸಚಿವರು ತೀವ್ರ ಅಸಮಧಾನ ಹೊರಹಾಕಿದರು. ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂದು ಜನರು ಕೇಳುತ್ತಾರೆ, ಇಲ್ಲಿ ನೀವು ಅನುದಾನ ಬಂದರೂ ಖರ್ಚು ಮಾಡಿಲ್ಲ, ಶೇ. ೩೦, ೪೦, ೫೦ ಸಾಧನೆ ಎನ್ನುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು. ಎಸ್‌ಎ-ï‌ಸಿ ೩ನೇ ಕಂತು ಈಗ ಬಂದಿದೆ ಎಂದು ಅಽಕಾರಿ ಸಮರ್ಥನೆಗೆ, ರೀ, ಟೆಂಡರ್ ಆದ ಮೇಲೆ ಕೆಲಸ ಏಕೆ ಮಾಡಿಲ್ಲ? ಹಣ ಬಂದ ಬಳಿಕವೇ ಕಾಮಗಾರಿ ಆರಂಭಿಸುತ್ತೀರಾ? ಇವರಿಗೆ ಮೊದಲು ಶೋಕಾಸ್ ನೋಟಿಸ್ ಕೊಡಿ ಎಂದು ಜಿಲ್ಲಾಽಕಾರಿಗೆ ಸೂಚಿಸಿದಾಗ, ಈ ವಿಚಾರದಲ್ಲಿ ಜಿಲ್ಲೆಯ ಎಲ್ಲರಿಗೂ ಶೋಕಾಸ್ ನೋಟಿಸ್ ಕೊಟ್ಟಿರುವುದಾಗಿ ಡಿಸಿ ಜಾನಕಿ ಕೆ.ಎಂ. ಹೇಳಿದರು. ಹಾಗಿದ್ದರೆ ಕಳಪೆ ಸಾಧನೆ ಮಾಡಿರುವ ಮರ‍್ನಾಲ್ಕು ಜನರನ್ನು ಸಸ್ಪೆಂಡ್ ಮಾಡಿ ಬಿಸಿ ಮುಟ್ಟಿಸಿ ಎಂದು ಸೂಚಿಸಿದರು.

ಅತ್ಯಂತ ವಾಹನ ಹಾಗೂ ಜನದಟ್ಟನೆ ಇರುವ ಗದ್ದನಕೇರಿ ಕ್ರಾಸ್ ನಲ್ಲಿ ಬಸ್ ಸೆಲ್ಟರ್ ಹಾಗೂ ಶೌಚಾಲಯ ವ್ಯವಸ್ಥೆ ಇಲ್ಲ. ಮಳೆಗಾಲ ಹಾಗೂ ಬೇಸಿಗೆಕಾಲದಲ್ಲಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಾರೆ. ಏನಾದರೂ ಕ್ರಮ ತೆಗೆದುಕೊಳ್ಳಿ ಎಂದು ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಸಭೆ ಗಮನಕ್ಕೆ ತಂದರು. ಆಗ ಎನ್‌ಡಬ್ಲುಕೆಆರ್‌ಟಿಸಿ ಅಽಕಾರಿ, ಅಲ್ಲಿ ಜಾಗದ ಸಮಸ್ಯೆ ಇದೆ. ಬಸ್ ಸೆಲ್ಟರ್ ನಿರ್ಮಿಸಲು ಅನುದಾನ ಕೊರತೆ ಇದೆ ಎಂದರು. ಆಗ ಶಾಸಕ ಜೆ.ಟಿ.ಪಾಟೀಲ ಅವರು, ಅಲ್ಲಿ ನಾಲ್ಕು ರಸ್ತೆಗಳಲ್ಲಿ ಬಸ್ ಸೆಲ್ಟರ್ ನಿರ್ಮಾಣ ಮಾಡಿ, ಬೇಕಿದ್ದರೆ ನಾನು ೨೦ ಅಥವಾ ೪೦ ಲಕ್ಷ ರೂ. ಅನುದಾನವನ್ನು ಶಾಸಕ ನಿಽಯಿಂದ ಕೊಡುವುದಾಗಿ ಹೇಳಿದರು.