ಜಿಲ್ಲೆ

ಪಡಿತರ ಕಮಿಷನ್ ನೀಡಬೇಕೆಂದು ಆಗ್ರಹ

ಸಂತೋಷ ದೇಶಪಾಂಡೆ

ಬಾಗಲಕೋಟೆ: ಕಳೆದ ನಾಲ್ಕರಿಂದ ಆರು ತಿಂಗಳಿಂದ ನಮಗೆ ಪಡಿತರ ವಿತರಣೆ ಹಣ ಸಂದಾಯವಾಗಿಲ್ಲ. ಇದರಿಂದ ನಮಗೆ ಕುಟುಂ ಬ ನಿರ್ವಹಣೆ ಕಷ್ಟವಾಗಿದೆ. ಕೂಡಲೇ ಸರಕಾರ ಪಡಿತರ ವಿತರಕರ ಕಮಿಷನ್ ಹಣ ನೀಡಬೇಕೆಂದು ತಾಲೂಕಿನ ಎಲ್ಲ ನ್ಯಾಯಬೆಲೆ ಅಂಗಡಿಕಾರರು ಜಂಟಿ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ಡಿತರ ವಿತರಕ ಸಂಘದ ಜಿಲ್ಲಾ ಅಧ್ಯಕ್ಷ ಶೇಖರ ಅಂಗಡಿ ಮಾತನಾಡಿ, ತಾಲೂಕಿನ ಎಲ್ಲ ನ್ಯಾಯಬೆಲೆ ಅಂಗಡಿಕಾರರು ಸರಕಾರ ನಿಗದಿ ಪಡಿಸಿದ ಹಂಚಿಕೆ ಪ್ರಮಾಣದಲ್ಲಿ ಇಲ್ಲಿಯವರೆಗೆ ಸರಿಯಾಗಿ ವಿತರಣೆ ಮಾಡುತ್ತ ಬಂದಿದೆ. ಆದರೆ ನಮಗೆ ಕಮಿಷನ್ ಹಣ ಮಾತ್ರ ಸರಿಯಾಗಿ ಸಂದಾಯವಾಗುತ್ತಿಲ್ಲ.ಅಂದರೆ ಮಾರ್ಚ್ 2024ರಿಂದ ಇಲ್ಲಿಯವರೆಗೆ ಒಟ್ಟು 6 ತಿಂಗಳ ನಮ್ಮ ಕಮಿಷನ್ ಬಂದಿಲ್ಲವೆಂದು ದೂರಿದರು.ಪಡಿತರ ವಿತರಕರ ಕಮಿಷನ್ ಅಷ್ಟೇ ಅಲ್ಲದೇ ಈ ಕೆವೈಸಿ ಹಣ ಸುಮಾರು 5 ವರ್ಷದಿಂದ ಬಂದಿಲ್ಲ.ಈ ಎಲ್ಲಾ ಕಾರಣಗಳಿಂದ ನ್ಯಾಯಬೆಲೆ ಅಂಗಡಿಯ ಮಾಲೀಕರ ಹಾಗೂ ಸಹಾಯಕರ ಕುಟುಂಬ ನಿರ್ವಹಣೆ ತುಂಬಾ ಕಷ್ಟಕರವಾಗಿದೆ. ಆದ್ದರಿಂದ ನಮಗೆ ಕಮಿಷನ್ ಹಣ ಮತ್ತು ಈ ಕೆವೈಸಿ ಹಣವನ್ನು ನೀಡಿ ಅಂಗಡಿ ನಿರ್ವಹಣೆಯನ್ನು ಸುಗಮವಾಗಿ ಮಾಡಿಕೊಡಬೇಕೆಂದು ಜಂಟಿ ನಿರ್ದೇಶಕರಿಗೆ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪಡಿತರ ವಿತರಕರಾದ ಕುಮಾರ ಅಂಗಡಿ,ರವೀಂದ್ರ ಗೊಂದಿ, ಮಹದೇವ ಕಡಬಲ್ಲನ್ನವರ ಬಸವರಾಜ ಬಂಡಿವಡ್ಡರ, ಗಂಗಾಧರ ನಾಗರಾಳ,ಹನಮಂತ ಕುಂದಗೋಳ, ವೀರೇಶ ಮೂರನಾಳ, ರಾಜು ಹುಳಬುತ್ತಿ, ಕುಮಾರ ಗಂಗಾವತಿ, ಮಹಾಂತೇಶ ಸಿಂಧಗಿ, ಪ್ರದೀಪ ಹುಲ್ಲೂರು, ಚೇತನ್ ಜಾಣಿಕಲ್ಲ, ಪ್ರಕಾಶ ಮೂಲಿಮನಿ,ಸೇರಿದಂತೆ ಜಿಲ್ಲೆಯ ನೂರಾರು ಪಡಿತರ ವಿತರಕರೂ ಭಾಗಿಯಾಗಿದ್ದರು