Oplus_131072 
ಜಿಲ್ಲೆ

ಪಡಿತರ ಅಕ್ಕಿ ಅಕ್ರಮ ಸಾಗಣೆ ಒಬ್ಬನ ಬಂಧನ

ಯಳಂದೂರು: ತಾಲೂಕಿನ ಕಿನಕಹಳ್ಳಿಯಿಂದ ಕೊಳ್ಳೇಗಾಲದ ಕಡೆಗೆ ಪಡಿತರ ಅಕ್ಕಿಯನ್ನು ಕಾರ್‌ನಲ್ಲಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಅಗರ-ಮಾಂಬಳ್ಳಿ ಪೊಲೀಸರು ಗುರುವಾರ ಬಂಧಿಸಿ, ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.

ಕೊಳ್ಳೇಗಾಲ ಈದ್ಗಾ ಮೊಹಲ್ಲಾ ನಿವಾಸಿ ಈದಾಯತ್ (34) ಬಂಧಿತ ಆರೋಪಿ. ಈತನಿಂದ 760 ಕೆ.ಜಿ ಅಕ್ಕಿ ಇರುವ 11,350 ರೂ.ಗಳ ಮೌಲ್ಯದ ಅಕ್ರಮ ಅಕ್ಕಿಯನ್ನು ಒಮಿನಿ ಕಾರ್ ಕೆಎ-14 ಎಂ-6657 ಮೂಲಕ ಸಾಗಣೆಗೆ ಬಳಸಿದ್ದ ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಸರ್ಕಾರ ಜನರಿಗೆ ನೀಡುವ ಪಡಿತರವನ್ನು ಅಕ್ಕಿಯನ್ನು ಯಳಂದೂರು ತಾಲೂಕಿನ ಗ್ರಾಮೀಣ ಭಾಗದಲ್ಲಿನ ಅಕ್ಕಪಕ್ಕದ ಗ್ರಾಮಗಳಲ್ಲಿ ಕಡಿಮೆ ಬೆಲೆಗೆ ಖರೀದಿ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಲುವಾಗಿ ಸಾಗಿಸುತ್ತಿದ್ದನು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ವಶಪಡಿಸಿಕೊಂಡಿದ್ದಾರೆ.

ಅಗರ ಮಾಂಬಳ್ಳಿ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ಕರಿಬಸಪ್ಪ ಹಾಗೂ ಆಹಾರ ನಿರೀಕ್ಷಕ ಬಿಸಲಯ್ಯ, ಸಿಬ್ಬಂದಿಗಳಾದ ಪರಶಿವಮೂರ್ತಿ, ಸಿದ್ದರಾಜು, ಶಿವಕುಮಾರ್ ಅಭಿಷೇಕ್ ಪ್ರಕಾಶ್ ಅವರು ದಾಳಿಯಲ್ಲಿ ಭಾಗವಹಿಸಿದ್ದರು. ಈ ಸಂಬಂಧ ಅಗರ-ಮಾಂಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.