ಗೋಣಿಕೊಪ್ಪ: ಕೊಡವ ಕೂಟಾಳಿಯಡ ಕೂಟದಿಂದ ಹುದಿಕೇರಿ ಮಡ್‌ಕೋಡ್ ಮಂದ್‌ನಲ್ಲಿ ಆಯೋಜಿಸಿದ್ದ ಪದ್ಧತಿ ಪಡಿಕನಾ- ಸಮ್ಮಂಧ ಅಡ್ಕನಾ ಸಮಾರೋಪ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ತರಬೇತಿದಾರ 25 ವರ್ಷದಿಂದ ಸಮ್ಮಂಧ ಅಡ್ಕುವ ಪದ್ಧತಿ ನಿಭಾಯಿಸಿರುವ ಚಂಗುಲಂಡ ಬೋಪಯ್ಯ, 800ಕ್ಕೂ ಅಧಿಕ ಪಾನಿ ಮಂಡೆತುಣಿ ಕಾರ್ಯ ನಿಭಾಯಿಸಿದ ಕೊಲ್ಲಿರ ಸಂಜು ಮಾಚಯ್ಯ ಅವರನ್ನು ಸನ್ಮಾನಿಸಲಾಯಿತು.
ತರಬೇತಿ ಪಡೆದ ಚಂಗುಲಂಡ ಬೆನ್ ಬೋಪಣ್ಣ, ಅಜ್ಜಮಾಡ ಮುದ್ದಪ್ಪ, ಅಜ್ಜಮಾಡ ಬೋಪಯ್ಯ, ಬೂವಕಂಡ ಅಪ್ಪಚ್ಚು ಸಮ್ಮಂದ ಅಡ್ಕುವ ತಕ್ಕ್ ಬಾಕ್ ಕಾರ್ಯಕ್ರಮ ಪ್ರದರ್ಶನ ಮಾಡಿದರು. ಚಂಗುಲಂಡ ಸೂರಜ್ ಪಾನಿ ಮಂಡೆತುಣಿ ಕಟ್ಟುವ ರೀತಿಯನ್ನು ವಿವರಿಸಿದರು.
ಕೂಟದ ಅಧ್ಯಕ್ಷೆ ಚಿಮ್ಮಚಿರ ಪವಿತ ರಜನ್ ಮಾತನಾಡಿ, ಕೊಡವ ಪದ್ಧತಿಯಲ್ಲಿ ಮದುವೆಯಲ್ಲಿ ಸಮ್ಮಂಧ ಅಡ್ಕುವ ಆಚರಣೆ ವಿಶೇಷವಾಗಿದ್ದು, ಸಮ್ಮಂದ ಅಡ್ಕುವೊ, ಪಾನಿ ಮಂಡೆ ತುಣಿ, ವಸ್ತ್ರ ಕೆಟ್ಟುವೊ, ಚ್ಯಾಲೆ ಸುತ್ತುವೊ ಬಗ್ಗೆ ಯುವಕರಿಗೆ ತರಬೇತಿ ನೀಡುವ ಕಾರ್ಯ ಮಾಡಲಾಗಿದೆ. ಇದರಿಂದ ಪದ್ಧತಿ ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ದಾನಿ ಬಯವಂಡ ಮಹಾಬಲ, ಕೂಟದ ಕಾರ್ಯದರ್ಶಿ ಚೆಟ್ಟೋಳಿರ ಶರತ್ ಸೋಮಣ್ಣ, ನಾಡ್‌ತಕ್ಕ ಅಜ್ಜಿಕುಟ್ಟಿರ ಪೃಥ್ವಿ ಸುಬ್ಬಯ್ಯ, ಚೆಕ್ಕೆರ ರಾಜೇಶ್, ಊರ್ ತಕ್ಕ ಬೊಳ್ಳಜಿರ ನಂಜಪ್ಪ, ಹುದಿಕೇರಿ ಗ್ರಾಪಂ ಸದಸ್ಯರಾದ ಕಿರಿಯಮಾಡ ಮಿಲನ್ ಗಣಪತಿ, ಚೆಕ್ಕೆರ ಚಂದ್ರಪ್ರಕಾಶ್, ಹುದಿಕೇರಿ ಕೊಡವ ಸಮಾಜ ನಿರ್ದೇಶಕ ಮಂಡಂಗಡ ಅಶೋಕ್, ಪೈಪೋಟಿ ನಿರ್ದೇಶಕ ನಂಬುಡುಮಾಡ ದಿಲನ್ ಅಚ್ಚಯ್ಯ, ಸದಸ್ಯ ಕಾಳಮಂಡ ರಾಬಿನ್ ಅಚ್ಚಮ್ಮ, ಸಾಂಸ್ಕೃತಿಕ ನಿರ್ದೇಶಕಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ, ಶೈಕ್ಷಣಿಕ ನಿರ್ದೇಶಕ ನೆಲ್ಲಚಂಡ ದಿಲನ್ ಇದ್ದರು.