ಜಿಲ್ಲೆ

ಪಡಸಾಲೆ ನಾಯಕರಿಂದ ಕಾಶ್ಮೀರ ಸಮಸ್ಯೆ: ಚಕ್ರವರ್ತಿ ಸೂಲಿಬೆಲೆ

reportermys

ಮೈಸೂರು: ಅಂದಿನ ನಮ್ಮ ರಾಜಕೀಯ ನಾಯಕರು ಪಡಸಾಲೆಯಲ್ಲಿ ತೆಗೆದುಕೊಂಡ ಕೆಲ ತೀರ್ಮಾನಗಳ ಪರಿಣಾಮ ನಮ್ಮದೇ ಭೂಮಿ ಕಾಶ್ಮೀರಕ್ಕಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಅಂಕಣಕಾರ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಬೇಸರ ವ್ಯಕ್ತಪಡಿಸಿದರು.


ಧಾತ್ರಿ ಪ್ರಕಾಶನದಿಂದ ನಗರದ ಕಲಾಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಎಸ್.ಉಮೇಶ್ ಅವರ ‘ಕಾಶ್ಮೀರ್ ಡೈರಿ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.


ದೇಶಕ್ಕೆ ಸ್ವತಂತ್ರೃಸಿಕ್ಕಾಗ ಬ್ರಿಟಿಷರು ಅನುಸರಿಸಿದ ಕುತಂತ್ರ ನೀತಿಯಿಂದ ಇಂದಿಗೂ ನೆರೆಯ ಪಾಕಿಸ್ಥಾನದೊಂದಿಗೆ ಹೋರಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಭಾರತವನ್ನು ಮೂರು ಭಾಗ ಮಾಡಿ ಹಿಂದೂಸ್ಥಾನದ ಜೊತೆಗೆ ಪೂರ್ವ, ಪಶ್ವಿಮ (ಈಗಿನ ಬಾಂಗ್ಲಾ) ಪಾಕಿಸ್ತಾನ ಮಾಡಿ ಕಾಶ್ಮೀರವನ್ನು ಸಮಸ್ಯೆಯಾಗುವಂತೆ ಮಾಡಿತು ಎಂದು ಟೀಕಿಸಿದರು.


ಅಂದು ದೃಢ ನಿರ್ಧಾರ ಕೈಗೊಳ್ಳಬೇಕಾದ ಅಂದಿನ ನಮ್ಮ ರಾಜಕೀಯ ನಾಯಕರು ಪಡಸಾಲೆಯಲ್ಲಿ ತೆಗೆದುಕೊಂಡ ಕೆಲ ತೀರ್ಮಾನಗಳ ಪರಿಣಾಮ ನಮ್ಮದೇ ಭೂಮಿಗಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಸರ್ದಾರ್ ವಲ್ಲಭ ಬಾಯಿ ಪಾಟೀಲ್ ಅವರು ಕಾಶ್ಮೀರ ಪಡೆಯಲೇ ಬೇಕು ಎಂದು ಮುನ್ನಡಿ ಇಟ್ಟು ಅಕ್ರಮಿತ ಪಾಕಿಸ್ತಾನಿ ಸೈನಿಕರನ್ನು ಹಿಮ್ಮೆಟ್ಟಿಸುವ ವೇಳೆಗೆ ಪ್ರಧಾನಿಯಾಗಿದ್ದ ನೆಹರು ಏಕಾಏಕಿ ಮಾಧ್ಯಮದ ಮೂಲಕ ಮಾತುಕತೆಗೆ ಘೋಷಿಸಿ ಬಿಟ್ಟರು. ಇದರಿಂದ ಗಡಿ ನಿಯಂತ್ರಣ ರೇಖೆಯಿಂದ ನಮ್ಮ ಸೈನಿಕರು ವಾಪಸ್ ಅದರೂ, ಪಾಕಿಸ್ತಾನಿ ಸೈನಿಕರು ಈಗಲೇ ಅಲ್ಲದೇ ಇದ್ದು ಸಮಸ್ಯೆ ಉಂಟು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕ್ಯಾಪ್ಟನ್ ನವೀನ್ ನಾಗಪ್ಪ ಅವರು, ಕಾರ್ಗಿಲ್ ಯುದ್ಧದ ಅನುಭವವನ್ನು ಬಿಚ್ಚಿಟ್ಟು ಯುದ್ಧಕ್ಕೆ ಹೊರಟ ವೇಳೆ ಧ್ವಜ ಹಾರಿಸುತ್ತೇನೆ. ಇಲ್ಲದಿದ್ದರೆ ಶವವಾಗಿ ಹೊರಬರುತ್ತೇನೆ ಎಂದು ತನ್ನ ಜವಾನರಿಗೆ ಹೇಳಿದ್ದೆ. ಕಡಿದಾಡ ಬೆಟ್ಟಗುಡ್ಡದಲ್ಲಿ ಅಡಗಿದ್ದ ಪಾಕಿಸ್ತಾನಿ ಸೈನಿಕರನ್ನು ಸೆದೆ ಬಡಿಯುವಾಗ ತೀವ್ರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದೆ. ಶತ್ರು ಪಾಳಯವನ್ನು ಹಿಮ್ಮೆಟ್ಟಿಸಿ ತನ್ನ ಜವಾನರು ಭಾರತದ ಧ್ವಜ ಹಾರಿಸಿದಾಗ ಸಂಸತ ಮನೆಮಾಡಿತು ಎಂದಾಗ ಸಭೆಯಲ್ಲಿ ಕರತಾಡನ ಮೊಳಗಿತು.
ಲೇಖಕ ಎಸ್.ಉಮೇಶ್ ಮಾತನಾಡಿ, ಕಾಶ್ಮೀರದಲ್ಲೂ ಬಗೆದಷ್ಟೂ ಹೊಸ ಹೊಸ ವಿಚಾರಗಳು ತಿಳಿಯುತ್ತವೆ. ಪ್ರತಿ ಬಾರಿ ಕಾಶ್ಮೀರಕ್ಕೆ ಹೋದಾಗಲೂ ಏಕಾತನತೆ ಇರುವುದಿಲ್ಲ. ಒಂದು ರೀತಿ ವಿಲಕ್ಷಣದ ಕಣಿವೆ. ಯಾವುದೇ ಉತ್ಪ್ರೇಕ್ಷೆ ಇಲ್ಲದೇ ಕಣ್ಣಾರೆ ಕಂಡಿದ್ದನ್ನು, ಇತಿಹಾಸದ ದಾಖಲೆಗಳ ಪರಾಮರ್ಶಿಸಿ, ಅಂತಃರಾಳದ ತವಕ ತಲ್ಲಣಗಳನ್ನು ದಾಖಲಿಸಿದ್ದೇನೆ ಎಂದರು.


ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ನಟರಾಜ್ ಕೃತಿ ಕುರಿತು ಮಾತನಾಡಿ, ಎಸ್.ಉಮೇಶ್ ಅವರ ಕಾಶ್ಮೀರ್ ಡೈರಿ ಪುಸ್ತಕವನ್ನು ಯುದ್ಧದ ವಿವರಣೆ ಪಡೆಯುವ ಕೈಪಿಡಿಯಾಗಿ ಮುಂದಿನ ಪೀಳಿಗೆ ಬಳಸಬಹುದು. 120 ಘಟನೆಗಳನ್ನು ರೋಚಕವಾಗಿ ರಚಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಭಾರತೀಯ ಸೇನೆಯ ನಿವೃತ್ತ ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಲೆ.ಜನರಲ್ ಪಿ.ಸಿ.ತಿಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಗ್ರೂಪ್ ಕ್ಯಾಪ್ಟನ್ ಡಾ.ವಿನಯ್ ವಿಠಲ್, ಪತ್ರಕರ್ತ ರವೀಂದ್ರ ಜೋಶಿ, ಪ್ರಕಾಶಕಿ ಬೃಂದಾ ಉಮೇಶ್ ಇದ್ದರು.