ಜಿಲ್ಲೆ

ಪಠ್ಯೇತರ ಚಟುವಟಿಕೆಯೂ ಮುಖ್ಯ

ಶನಿವಾರಸಂತೆ: ಮಕ್ಕಳು ಪಠ್ಯೇತರ ಚಟುವಟಿಕೆಯಲ್ಲೂ ಬೆಳೆಯಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ ಎಂದು ಶನಿವಾರಸಂತೆ ಗ್ರಾ.ಪಂ. ಅಧ್ಯಕ್ಷೆ ಗೀತಾ ಹರೀಶ್ ಹೇಳಿದರು. ಅವರು ಶನಿವಾರಸಂತೆ ಬ್ರೈಟ್ ಅಕಾಡೆಮಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ತಮ್ಮಲ್ಲಿ ಹುದುಗಿರುವ ಪ್ರತಿಭೆಗಳನ್ನು ಪ್ರತಿಭಾ ಕಾರಂಜಿ ಮೂಲಕ ಹೊಮ್ಮಿಸಬೇಕು. ಇಲ್ಲಿ ಯಾವುದೇ ಅಂಜಿಕೆ ಮತ್ತು ಅಳುಕು ಇರಬಾರದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಸಿ.ಕೆ.ದಿನೇಶ್ ಮಾತನಾಡಿ, ಪ್ರತಿ ವರ್ಷವೂ ನಡೆಯುವ ಕ್ಲಸ್ಟರ್, ಹೋಬಳಿ, ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯಿಂದ ನೂರಾರು ಮಕ್ಕಳ ಪ್ರತಿಭೆ ಗುರುತಿಸಲು ಅವಕಾಶ ದೊರಕಿದಂತಾಗಿದೆ ಎಂದರು.
ಬ್ರೈಟ್ ಅಕಾಡೆಮಿ ಅಧ್ಯಕ್ಷ ಪರಮೇಶ್, ವಿದ್ಯಾಸಂಸ್ಥೆ ಕಾರ್ಯದರ್ಶಿ ಹೇಮಾ, ದೈಹಿಕ ಶಿಕ್ಷಣ ಶಿಕ್ಷಕಿ ಕವಿತಾ ಇತರರು ಇದ್ದರು. 13 ಶಾಲೆಗಳ 350 ಮಕ್ಕಳು ಭಾಗವಹಿಸಿದ್ದರು.